ಇದು ಬಿಗ್-3 ಬಿಗ್ ಇಂಪ್ಯಾಕ್ಟ್: ಭೂಗಳ್ಳರ ಪಾಲಾಗಿದ್ದ ಸರ್ಕಾರಿ ಜಾಗದಲ್ಲಿ ಸರ್ವೆ ಕಾರ್ಯ ಶುರು
ಅವರನ್ನು ಹೇಳೋರು ಕೇಳೋರು ಯಾರು ಇರಲಿಲ್ಲ. ಆ ಕೆಲವು ಜನರು ಅಲ್ಲಿ ಆಡಿದ್ದೇ ಆಟ ಆಗಿತ್ತು. ಯಾಕಂದ್ರೆ, ಕೋಟ್ಯಂತರ ರೂಪಾಯಿಯ ಸಿಕ್ಕ ಸಿಕ್ಕ ಜಾಗವನ್ನು ಕಬಳಿಕೆ ಮಾಡ್ತಿದ್ರೂ, ಈ ಬಗ್ಗೆ ಬಿಗ್3ಯಲ್ಲಿ ವರದಿ ಪ್ರಸಾರ ಆದ್ಮೇಲೆ ಅಲ್ಲಿನ ಚಿತ್ರಣವೇ ಬದಲಾಯ್ತು.
ಕಳೆದ ತಿಂಗಳು ಹುಬ್ಬಳ್ಳಿಯ ಸರ್ಕಾರಿ ಭೂಮಿ ಕಬಳಿಕೆ ಬಗ್ಗೆ ಬಿಗ್3ಯಲ್ಲಿ ವರದಿ ಪ್ರಸಾರ ಮಾಡಿದ್ವಿ. ವಿದ್ಯಾ ನಗರದಲ್ಲಿರೋ ಪ್ರಗತಿ ಕಾಲೋನಿಯ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗುತ್ತಿದೆ. ಇದನ್ನು ತಡೆದು, ಪಾಲಿಕೆ ಆಸ್ತಿ ಉಳಿಸಿಕೊಳ್ಳಲು ಇಲ್ಲಿನ ಜನ ದೊಡ್ಡ ಹೋರಾಟಕ್ಕಿಳಿದ್ದಿದ್ದರು. ಇದೀಗ ಬಿಗ್-3ಯಲ್ಲಿ ವರದಿ ಇಂಪ್ಯಾಕ್ಟ್ ಆಗಿದ್ದು, ಸರ್ವೆ ಕಾರ್ಯವು ನಡೆದಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಇದು ಪಾಲಿಕೆ ಆಸ್ತಿ. ಅಷ್ಟೇ ಅಲ್ಲದೇ ಶಾಶ್ವತವಾದ ಗ್ರೀನ್ ಬೆಲ್ಟ್ ಪ್ರದೇಶದ ಈ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ.. ಆದ್ರೆ, ಭೂಗಳ್ಳರು ಈ ಜಾಗವನ್ನು ಕಬಳಿಸಿ ತಮ್ಮದೇ ಸ್ವಂತ ಆಸ್ತಿ ಎಂಬಂತೆ ಕಾಂಪೌಂಡ್ ಹಾಕಿದ್ರು. ಅಷ್ಟೇ, ಅಲ್ಲದೆ ಸರ್ಕಾರಿ ಜಾಗದಲ್ಲಿ ಬೋರ್ವೆಲ್ ಕೊರೆದು ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದರು. ಬಿಗ್-3 ವರದಿ ಪ್ರಸಾರವಾದ ಬಳಿಕ ಇದಕ್ಕೆ ಬ್ರೇಕ್ ಬಿದ್ದಿದೆ.
ಬಿಜೆಪಿಯ ಜಾತಿ ತಂತ್ರ-ಅಭಿವೃದ್ಧಿಯ ಮಂತ್ರ: ಪ್ರಬಲ ಮಠಗಳಿಗೆ ಕೇಸರಿ ದಿಗ್ಗಜರ ಭೇಟಿಯ ಗುಟ್ಟೇನು?