Big 3: ಇತಿಹಾಸವ ಸೃಷ್ಟಿಸಿದ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ: ವಿಜಯಪುರದ ತ್ರಿಮೂರ್ತಿಗಳ ಕಾರ್ಯ ಶ್ಲಾಘನೀಯ

ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ಹಿಂದೆಂದು ಕಂಡು ಕೇಳರಿಯದ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದೆ.

Share this Video
  • FB
  • Linkdin
  • Whatsapp

ಸರಳತೆಗೆ, ಜ್ಞಾನ ಭಂಡಾರಕ್ಕೆ ಇನ್ನೊಂದು ಹೆಸರೇ ವಿಜಯಪುರ ಜಿಲ್ಲೆಯ ಜ್ಞಾನಯೋಗಿ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ಇತಿಹಾಸದ ಮಹಾತ್ಮರಾದ ಶ್ರೀಗಳು ತಾವು ಮೊದಲೇ ನಿರ್ಧರಿಸಿದಂತೆ ಬಯಲಲ್ಲಿ ಬಯಲಾಗಿ ಹೋಗಿದ್ದಾರೆ. ಸಿದ್ದೇಶ್ವರ ಶ್ರೀಗಳ ಬದುಕೇ ಒಂದು ತೂಕವಾದರೆ, ಅವರ ನಿಧನದ ಸುದ್ದಿ ತಿಳಿದು ಅವರ ಅಂತಿಮ ದರ್ಶನಕ್ಕೆ ಬಂದ ಭಕ್ತರದ್ದೇ ಇನ್ನೊಂದು ತೂಕ. ಯಾಕಂದ್ರೆ ಅವರ ಅಂತಿಮ ದರ್ಶನಕ್ಕೆ ಸೇರಿದ್ದ ಜನಸ್ತೋಮವೇ ಒಂದು ದಾಖಲೆಯನ್ನು ನಿರ್ಮಿಸಿದೆ. ಶ್ರೀಗಳ ಅಂತಿಮ ಯಾತ್ರೆಯಲ್ಲಿ 25 ಲಕ್ಷಕ್ಕೂ ಅಧಿಕ ಜನರು ಸೇರಿದ್ದರೂ, ಒಂದೇ ಒಂದು ಅಡೆತಡೆಗಳು ಕೂಡ ಆಗಲಿಲ್ಲ. ಇಡೀ ಪರಿಸ್ಥಿಯನ್ನ ನಿಭಾಯಿಸಿದ್ದು ವಿಜಯಪುರದ ಆ ಮೂವರು ತ್ರಿಮೂರ್ತಿಗಳು. ಅವರೇ ಇವತ್ತಿನ ನಮ್ಮ ಬಿಗ್ 3 ಹೀರೋಗಳು.

ಕಾಂಗ್ರೆಸ್ ಕೋಟೆಯಲ್ಲಿ ಕಾಳಗ: ಟಿಕೆಟ್ ಘೋಷಣೆಗೂ ಮೊದಲೇ ಕಲಹ ಶುರು

Related Video