ಬ್ಯಾಲಾಳ ಗ್ರಾಮದಲ್ಲಿ ಇಲ್ಲ ಸ್ಮಶಾನ: ಅಂತ್ಯಕ್ರಿಯೆಗೆ ಪರದಾಟ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದಲ್ಲಿ ಸ್ಮಶಾನವಿಲ್ಲ. ಶವಸಂಸ್ಕಾರ ಮಾಡಲು ಪರದಾಡುವ ಪರಿಸ್ಥಿತಿ ಇದೆ.
ಬ್ಯಾಲಾಳ ಗ್ರಾಮದಲ್ಲಿ 4 ಸಾವಿರ ಜನಸಂಖ್ಯೆಯಿದ್ದು, ಯಾರಾದ್ರೂ ತೀರಿ ಹೋದ್ರೆ ಶವಸಂಸ್ಕಾರ ಮಾಡಲು ಜಾಗವಿಲ್ಲ. ಇದಕ್ಕಾಗಿ ಆ ಗ್ರಾಮದ ಜನರು ಪರದಾಡುವಂತಾಗಿದ್ದು, ಶವವನ್ನಿಟ್ಟು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 50 ವರ್ಷಗಳಿಂದ ಇಲ್ಲಿ ಈ ಸಮಸ್ಯೆ ಇದ್ದು, ಸ್ಮಶಾನಕ್ಕೆ ಸರ್ಕಾರ ಎರಡು ಎಕರೆ ಜಮೀನು ಮಂಜೂರು ಮಾಡಿದ್ದು, ಆದರೆ ತಹಶೀಲ್ದಾರ್ ನಿರ್ಲಕ್ಷ್ಯದಿಂದ ಜಮೀನು ಖರೀದಿಯಾಗಿಲ್ಲ.