BIG 3 ಚಾರ್ಮಾಡಿ ಚೆಕ್‌ ಪೋಸ್ಟ್‌ಗೆ ಕಾಯಕಲ್ಪ: ಇದು ಬಿಗ್ 3 ಫಲಶ್ರುತಿ

ಚಾರ್ಮಾಡಿಯ ಘಾಟ್'ನಲ್ಲಿ ಜಗತ್ತೇ ಮೆಚ್ಚೋ ಸೌಂದರ್ಯ ಇದ್ರೂ, ಅರಣ್ಯ ಸಿಬ್ಬಂದಿಗೆ ಮಾತ್ರ ಅದು ಶಾಪವಾಗಿತ್ತು. ಬಿಗ್ 3ಯಲ್ಲಿ ವರದಿ ಇಂಪ್ಯಾಕ್ಟ್ ಆಗಿದ್ದು, ಆ ಸಮಸ್ಯೆಗೆ ಇದೀಗ ಮುಕ್ತಿ ಸಿಗುತ್ತಿದೆ. 
 

Share this Video
  • FB
  • Linkdin
  • Whatsapp

ಕೊಟ್ಟಿಗೆಹಾರದ ಬಳಿ ಕಳ್ಳರನ್ನು ಪತ್ತೆ ಹಚ್ಚಲು ನಿರ್ಮಾಣ ಮಾಡಿದ್ದ ಚೆಕ್ ಪೋಸ್ಟ್ ಅವ್ಯವಸ್ಥೆಯ ಆಗರ ಆಗಿತ್ತು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್'ನ ಬಿಗ್ 3ಯಲ್ಲಿ ವರದಿ ಪ್ರಸಾರವಾದ ತಕ್ಷಣ, ಡಿಎಫ್ಓ ಕ್ರಾಂತಿ ತಾತ್ಕಾಲಿಕ ದುರಸ್ಥಿ ಕಾರ್ಯದ ಬಗ್ಗೆ ಭರವಸೆ ನೀಡಿದ್ದರು. ಇದೀಗ ನೀಡಿದ ಭರವಸೆಯಂತೆ ತಾತ್ಕಾಲಿಕ ದುರಸ್ಥಿ ಕಾರ್ಯವನ್ನು ಮಾಡುತ್ತಿದ್ದಾರೆ. ಈಗಾಗಲೇ ತನಿಖೆ ದಳದ ಕೊಠಡಿ ಮೇಲ್ಭಾಗದಲ್ಲಿ ಹೊಸ ಶೀಟ್, ಕಿಟಕಿ ಬಾಗಿಲಿನ ರಿಪೇರಿ, ವಿದ್ಯುತ್ ಸಂಪರ್ಕ, ಶೌಚಾಲಯದ ದುರಸ್ಥಿ, ಸುಣ್ಣಬಣ್ಣದ ಜೊತೆಗೆ ಕುಡಿಯುವ ನೀರಿನ ಸೌಲಭ್ಯವನ್ನು ಕೂಡ ಕಲ್ಪಿಸುತ್ತಿದ್ದಾರೆ. ಒಂದೂವರೆ ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಬಿಗ್ 3 ಕಾರ್ಯಕ್ಕೆ ಸ್ಥಳೀಯರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Related Video