ಮೆಟ್ರೋ ಪಿಲ್ಲರ್ ದುರಂತಕ್ಕೆ 18 ಅಡಿ ಎತ್ತರ ಕಂಬಿ ಕಟ್ಟಿರೋದೇ ಕಾರಣ?: IISC ಪ್ರೊಫೆಸರ್ ಹೇಳಿದ್ದೇನು?
ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಹಾಗೂ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 80% ತನಿಖೆ ಮುಗಿಸಿದ್ದೇವೆ ಎಂದು IISC ಪ್ರೊಫೆಸರ್ ಚಂದ್ರ ಕಿಶನ್ ಹೇಳಿದ್ದಾರೆ.
ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಮಗಾರಿಗೆ ಯಾವ ಕಂಬಿ ಬಳಕೆ ಮಾಡಲಾಗಿದೆ. ಅದ್ರ ಕ್ವಾಲಿಟಿ ಸರ್ಟಿಫಿಕೇಟ್'ನ್ನು ತರಿಸಿಕೊಂಡಿದ್ದೇವೆ ಎಂದು ಚಂದ್ರ ಕಿಶನ್ ಹೇಳಿದರು. ಅದರ ಜೊತೆಗೆ ಜಲ್ಲಿ, ಮಣ್ಣು ಹಾಗೂ ಸಿಮೆಂಟ್'ಗಳ ಟೆಸ್ಟಿಂಗ್ ರಿಪೋರ್ಟ್ ಪಡೆದಿದ್ದೇವೆ. ಸಧ್ಯ ಮೇಲ್ನೋಟಕ್ಕೆ ಕಂಟ್ರಾಕ್ಟರ್'ಗಳೇ ನೇರ ಹೊಣೆಯಾಗಿದ್ದಾರೆ ಎಂದರು. ಈ ಪಿಲ್ಲರ್ ನಿರ್ಮಾಣದ ವೇಳೆ 18 ಮೀಟರ್ ಎತ್ತರದ ಕಂಬಿ ಕಟ್ಟಿದ್ದಾರೆ. ಈ ಎತ್ತರದಲ್ಲಿ 6 ಫ್ಲೋರ್ ಮನೆ ಕಟ್ಟಬಹುದು. ಇಷ್ಟು ಎತ್ತರದ ಪಿಲ್ಲರ್'ಗೆ ಕಂಬಿ ಕಟ್ಟಿದಾಗ ಯಾವ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಿದ್ದಾರೆ?. ಮುಂಜಾಗ್ರತಾ ಕ್ರಮವಾಗಿ ಕಂಬಿಯ ಪಿಲ್ಲರ್'ಗೆ ಸಪೋರ್ಟ್ ನೀಡಬೇಕಿತ್ತು, ಅದನ್ನು ನೀಡಿಲ್ಲ ಅನ್ನೋದು ಇದ್ರಿಂದ ಗೊತ್ತಾಗುತ್ತಿದೆ. ಆದ್ರೆ ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. 100% ವರದಿ ಮುಗಿದ ಬಳಿಕವೇ ಕಾರಣ ಯಾರು ಅನ್ನೋದು ಗೊತ್ತಾಗುತ್ತೆ ಎಂದರು. ಕೆಲಸಗಾರರು ಕಂಬಿಯ ಪಿಲ್ಲರ್'ನ್ನೇ ನೇರವಾಗಿ ನಿಲ್ಲಿಸಲು ಸುತ್ತಲು ಸಪೋರ್ಟ್ ನೀಡಬೇಕಿತ್ತು. ಅದು ಕೆಲಸಗಾರರಿಗೆ ಗೊತ್ತಾಗಲ್ಲ, ಕಂಟ್ರಾಕ್ಟರ್ ಹಾಗೂ ಇಂಜಿನಿಯರ್'ಗಳೇ ಅದನ್ನ ನೋಡಿಕೊಳ್ಳಬೇಕು. ಸಧ್ಯ ಕಂಟ್ರಾಕ್ಟರ್ ಹಾಗೂ ಇಂಜಿನಿಯರ್'ಗಳೇ ನೇರ ಹೊಣೆಯಾಗಲಿದ್ದಾರೆ ಎಂದರು.