ಆನ್‌ಲೈನ್ ಗೇಮ್‌ ಹುಚ್ಚು, ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾವು

ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್‌ನಲ್ಲಿ ನಡೆದಿದೆ. 25 ವರ್ಷದ ವಿಜಯ್‌ಕುಮಾರ್ ಹೊಳ್ಳೆ ಎಂಬ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

First Published Dec 28, 2024, 9:50 PM IST | Last Updated Dec 28, 2024, 9:51 PM IST

ಬೀದರ್‌ (ಡಿ.28): ಆನ್‌ಲೈನ್ ಗೇಮ್‌ ಹುಚ್ಚಿನಿಂದಾಗಿ, ಆತ್ಮಹತ್ಯೆಗೆ ಯತ್ನಿಸಿದ ಯುವಕ ಸಾವು ಕಂಡಿರುವ ಘಟನೆ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮುಂಜಾನೆ 25 ವರ್ಷದ ವಿಜಯ್‌ಕುಮಾರ್ ಹೊಳ್ಳೆ ಸಾವು ಕಂಡಿದ್ದಾರೆ. ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಯುವಕ, .25ರಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಭಾಲ್ಕಿ ತಾಲೂಕಿನ ಜ್ಯೋತಿ ತಾಂಡಾ ಬಳಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ.

ಎರಡು ದಿನಗಳ ಕಾಲ ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡಿದ್ದ ಯುವಕನನ್ನು ಬಸವಕಲ್ಯಾಣ ಶಾಸಕ ಶರಣು ಸಲಗರ್ ಭೇಟಿ ಮಾಡಿದ್ದರು. ಆನ್‌ಲೈನ್‌ ಗೇಮ್‌ಗೆ ಯುವಕರು ಬಲಿಯಾಗುತ್ತಿದ್ದು, ಸರ್ಕಾರ ಆನ್‌ಲೈನ್ ಗೇಮ್‌ಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದರು. ಬಿ.ಫಾರ್ಮಸಿ ಪದವೀಧರನಾಗಿದ್ದ ವಿಜಯ್‌ಕುಮಾರ್ ಹೊಳ್ಳೆ, ಮೊದಲಿಗೆ ಹತ್ತು ಲಕ್ಷ ಸಾಲ ಮಾಡಿ ಆನ್‌ಲೈನ್ ಗೇಮ್‌ನಲ್ಲಿ ಹಣ‌ ಕಳೆದುಕೊಂಡಿದ್ದ.

ನಿವೇದಿತಾ ಗೌಡ VS ಜ್ಯೋತಿ ರೈ: ಹಾಟ್‌ನೆಸ್‌ನಲ್ಲಿ ಯಾರು ಬೆಸ್ಟ್‌!

ಕುಟುಂಬಸ್ಥರು ಈ ಹತ್ತು ಲಕ್ಷ ಸಾಲ ತೀರಿಸಿದ‌ ಮೇಲೆ ಮತ್ತೆ 2 ಲಕ್ಷ ಸಾಲ‌ ಮಾಡಿಕೊಂಡಿದ್ದ. ಈ ಸಾಲದ ವಿಷಯ ಮನೆಯಲ್ಲಿ ಗೊತ್ತಾದ್ರೆ ತೊಂದ್ರೆ ಆಗುತ್ತೆ ಅಂತಾ ಯುವ ಆತ್ಮಹತ್ಯೆಗೆ ಯತ್ನ ಮಾಡಿದ್ದ. ಗಂಭೀರ ಗಾಯಗೊಂಡ ಯುವಕನನ್ನು ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು