ಅಧಿಕಾರದ ದರ್ಪ: ಶಾಸಕನ ಸಹೋದರರಿಂದ ಕ್ರಷರ್ ಮಾಲೀಕನಿಗೆ ಹಲ್ಲೆ

ರಸ್ತೆ ವಿಚಾರವಾಗಿ ಶಾಸಕರೊಬ್ಬರ ಸಹೋದರು ಗೂಂಡಾಗಿರಿ ನಡೆಸಿದ್ದಾರೆ.  ಶಾಸಕ, ಮಾಜಿ‌ ಗಣಿಗಾರಿಕೆ ಸಚಿವರ ಸಹೋದರರು ಮತ್ತು ಸಹಚರರು ಕ್ರಷರ್ ಮಾಲೀಕನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share this Video
  • FB
  • Linkdin
  • Whatsapp

ಬೀದರ್ (ಡಿ.12): ಗಣಿಗಾರಿಕೆಗೆ ಸಂಬಂಧಿಸಿ ಕಾಂಗ್ರೆಸ್ ಶಾಸಕನ ಸಹೋದರು ಗೂಂಡಾಗಿರಿ ನಡೆಸಿದ್ದಾರೆ. ಬೀದರ್ ಜಿಲ್ಲೆಯ ಹುಮನಾಬಾದ್ ಶಾಸಕ, ಮಾಜಿ‌ ಗಣಿಗಾರಿಕೆ ಸಚಿವ ರಾಜಶೇಖರ್ ಪಾಟೀಲ್ ಸಹೋದರರು, ಕ್ರಷರ್ ಮಾಲೀಕ ಶರಣ ರೆಡ್ಡಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಶಾಸಕ ರಾಜಶೇಖರ ಪಾಟೀಲ್ ಸಹೋದರರಾದ ಸಿದ್ದು ಪಾಟೀಲ್, ಸಂತೋಷ್ ಪಾಟೀಲ್, ಸುನೀಲ್ ಪಾಟೀಲ್ ಮತ್ತು ಸುಮಾರು 20 ಜನ ಸಹಚರರು ಹಲ್ಲೆ ನಡೆಸಿರುವ ಎಕ್ಸ್‌ಕ್ಲೂಸಿವ್ ಸಿಸಿಟಿವಿ ದೃಶ್ಯಗಳು ಸುವರ್ಣ ನ್ಯೂಸ್‌ಗೆ ಲಭ್ಯವಾಗಿವೆ.

ಇದನ್ನೂ ನೋಡಿ | ಮಾನವೀಯತೆಯನ್ನೇ ಮರೆತ ಜನ: ಗರ್ಭಿಣಿಗೆ ರಕ್ತ ಬರುವಂತೆ ಥಳಿಸಿದ ಪುಂಡರು!...

ಶಾಸಕ ರಾಜಶೇಖರ ಪಾಟೀಲ್ ಅವರ ಕ್ರಷರ್‌ಗೆ ಹೋಗಲು ರಸ್ತೆ ಬಿಡುವಂತೆ ಹಲ್ಲೆ ನಡೆಸಲಾಗಿದ್ದು, ಹುಮನಾಬಾದ್ ಪೊಲೀಸರು ಮಧ್ಯ ಪ್ರವೇಶಿದರೂ, ಅವರ ಎದುರಲ್ಲೇ ಹಲ್ಲೆ ನಡೆಸಿದ್ದಾರೆ.

Related Video