ಕೆ.ಆರ್. ಪೇಟೆಯಲ್ಲಿ ರಾತ್ರೋರಾತ್ರಿ ಭಗವಾಧ್ವಜ ತೆರವು: ಧ್ವಜದ ಜೊತೆ ಕಂಬವನ್ನೇ ತೆರವುಗೊಳಿಸಿದ ಪುರಸಭೆ!

ರಾತ್ರೋರಾತ್ರಿ ಪುರಸಭೆ ಅಧಿಕಾರಿಗಳಿಂದ ಭಗವಾಧ್ವಜ ತೆರವು
ಭಗವಾಧ್ವಜದ ಜತೆ ಧ್ವಜಕಂಬನ್ನೇ ತೆರವುಗೊಳಿಸಿದ ಪುರಸಭೆ
ಭಗವಾಧ್ವಜದ ಜತೆ ಮಹನೀಯರ ಕಳಸ ಫ್ಲೆಕ್ಸ್ ಕೂಡ ತೆರವು
 

First Published Jul 14, 2024, 2:34 PM IST | Last Updated Jul 14, 2024, 2:34 PM IST

ಕೆರೆಗೋಡು ಹನುಮ ಧ್ವಜ (Hanuma Dhwaja) ಬಳಿಕ ಭಗವಾಧ್ವಜ ವಿವಾದ ಶುರುವಾಗಿದೆ. ಕೆ.ಆರ್ ಪೇಟೆಯಲ್ಲಿ(KR pete) ರಾತ್ರೋರಾತ್ರಿ ಭಗವಾಧ್ವಜ (Bhagwa Dhwaja)ತೆರವು ಮಾಡಲಾಗಿದೆ. ಕೆ.ಆರ್.ಪೇಟೆ ಪಟ್ಟಣದ ಟಿ.ಬಿ. ವೃತ್ತದಲ್ಲಿದ್ದ ಭಗವಾಧ್ವಜ ಹಾಕಲಾಗಿತ್ತು. ಭಗವಾಧ್ವಜ ಜತೆ ಮಹನೀಯರ ಕಳಸ ಫ್ಲೆಕ್ಸ್‌ನನ್ನು ತೆರವು ಮಾಡಲಾಗಿದೆ. ಪುರಸಭೆ ಅಧಿಕಾರಿಗಳಿಂದ ಭಗವಾಧ್ವಜ ತೆರವು ಮಾಡಲಾಗಿದೆ. ಅಧಿಕಾರಿಗಳ ವಿರುದ್ದ ಹಿಂದೂ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹಲವು‌ ವರ್ಷಗಳಿಂದ ಟಿಬಿ ವೃತ್ತದಲ್ಲಿ ಭಗವಾಧ್ವಜ ಹಾರುತ್ತಿತ್ತು. ಕೆಲ ದಿನಗಳ ಹಿಂದೆ ಧ್ವಜ‌ವನ್ನು  ಕೆ.ಆರ್.ಪೇಟೆ ಪುರಸಭೆ ತೆರವುಗೊಳಿಸಿತ್ತು. ನಿನ್ನೆಯಷ್ಟೇ ಮತ್ತೆ ಭಗವಾಧ್ವಜ‌ವನ್ನು ಹಿಂದೂ ಕಾರ್ಯಕರ್ತರು ಹಾರಿಸಿದ್ದರು. 

ಇದನ್ನೂ ವೀಕ್ಷಿಸಿ:  ಮಲೆನಾಡಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಲಗ್ಗೆ: ಟ್ರಾಫಿಕ್‌ ಜಾಮ್‌ ನಡುವೆಯೂ ಮಸ್ತ್‌ ಮಸ್ತ್‌ ಡ್ಯಾನ್ಸ್‌