ಎಚ್ಚರ; ಬಂದ್, ಪ್ರತಿಭಟನೆ ಬಿಸಿ ಮುಗಿದಿಲ್ಲ.. ಸರ್ಕಾರಿ ಬಸ್ ಓಡಾಡಲ್ಲ!
ಬೆಂಗಳೂರಿಗೆ ಮತ್ತೆ ಪ್ರತಿಭಟನೆ ಬಿಸಿ/ ಸಾರಿಗೆ ನೌಕರರಿಂದ ಗುರುವಾರ ಪ್ರತಿಭಟನೆ/ ಬೆಂಗಳೂರಿಗೆ ಮತ್ತೆ ತಟ್ಟಲಿದೆ ಟ್ರಾಫಿಕ್ ಕಿರಿಕಿರಿ / ಸರ್ಕಾರಿ ಬಸ್ ಸಂಚಾರ ಮಾಡಲ್ಲ
ಬೆಂಗಳೂರು(ಡಿ. 09) ಬೆಂಗಳೂರಿನ ಜನರೇ ಎಚ್ಚರ ಎಚ್ಚರ.. ಗುರುವಾರವೂ ಪ್ರತಿಭಟನೆ ಬಿಸಿ ತಟ್ಟಲಿದೆ. ರೈತ ಸಂಘಟನೆಗಳ ನಂತರ ಇದೀಗ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದಾರೆ.
ವಿವಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಪ್ರತಿಭಟನೆಗೆ ಕರೆ ನೀಡಿದ್ದು ವಿಧಾನಸೌಧಕ್ಕೆ ಜಾಥಾ ತೆರಳಲಿದ್ದಾರೆ.