Asianet Suvarna News Asianet Suvarna News

ಗೋ ಹತ್ಯೆ ನಿಷೇಧ ಮಸೂದೆ ಪಾಸ್: ಕಾನೂನು ಉಲ್ಲಂಘಿಸಿದ್ರೆ ಜೈಲು, ದಂಡ ಫಿಕ್ಸ್...!

ಹಿಂದೂಗಳ ಬಹುಬೇಡಿಕೆಯಾಗಿದ್ದ ಗೋ ಹತ್ಯೆ ನಿಷೇಧ ಮಸೂದೆ ಕೊನೆಗೂ ಕರ್ನಾಟಕದಲ್ಲಿ ಅಂಗೀಕಾರವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಉಲ್ಲಂಘಿಸಿದ್ರೆ ಜೈಲು, ದಂಡ ಫಿಕ್ಸ್...

Cow slaughter ban bill passed In Karnataka rbj
Author
Bengaluru, First Published Dec 9, 2020, 8:03 PM IST

ಬೆಂಗಳೂರು, (ಡಿ.09): ಭಾರೀ ವಿರೋಧದ ನಡುವೆಯೂ ವಿಧಾನಸಭೆ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಸಿಕ್ಕಿದೆ. ಇದರಿಂದ ಹಲವರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಗೋ ಹತ್ಯೆ ನಿಷೇಧ ವಿಧೇಯಕವನ್ನು ಪಶುಸಂಗೋಪಾನಾ ಸಚಿಪ ಪ್ರಭು ಚೌವ್ಹಾಣ್ ಅವರು ಸದನದಲ್ಲಿ ಮಂಡಿಸಿದರು. ಇದನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತಕ್ಕೆ ಹಾಕಿದ್ದರು.

 ವಿಧೇಯಕ ಮಂಡನೆಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿವೆ. ಸದನದ ಬಾವಿಗೆ ಇಳಿದು, ಕಾಂಗ್ರೆಸ್, ಜೆಡಿಎಸ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ವಿರೋಧದ ಮಧ್ಯೆಯೂ ಗೋ ಹತ್ಯೆ ನಿಷೇಧ ಬಿಲ್​ಗೆ ಅಂಗೀಕಾರ ಸಿಕ್ಕಿದೆ.

ಕಾಯ್ದೆಯ ಕೆಲ ಮುಖ್ಯಾಂಶಗಳು
* ಗೋ ಹತ್ಯೆ, ಗೋಮಾಂಸ ಮಾರಾಟ ಕ್ರಿಮಿನಲ್ ಅಪರಾಧ
* ಗೋಹತ್ಯೆ ಮಾಡಿದರೆ ಕನಿಷ್ಠ 3 ವರ್ಷ, ಗರಿಷ್ಠ 5 ವರ್ಷ ಜೈಲು. ಜೊತೆಗೆ ಕನಿಷ್ಠ 50000 ರೂ.ನಿಂದ ಗರಿಷ್ಠ 5 ಲಕ್ಷ ದಂಡ. 
* 2ನೇ ಅಥವಾ ಅದಕ್ಕಿಂತ ಹೆಚ್ಚು ಬಾರಿ ಅಪರಾಧ ಮಾಡಿದರೆ ಕನಿಷ್ಠ 1 ಲಕ್ಷ, ಗರಿಷ್ಠ 10 ಲಕ್ಷ ರೂ. ದಂಡ, 7 ವರ್ಷಗಳ ವರೆಗೆ ಜೈಲು.
*  ಹೊರರಾಜ್ಯಕ್ಕೆ ಗೋ ಸಾಗಣೆ ನಿಷಿದ್ಧ
* ರಾಜ್ಯದೊಳಗೆ ಕೃಷಿ, ಹೈನುಗಾರಿಕೆ ಉದ್ದೇಶ ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಸಾಗಣೆ ನಿಷಿದ್ಧ
* ಇನ್ನು 13 ವರ್ಷ ವಯಸ್ಸಿನ ಮೇಲ್ಪಟ್ಟ ಎಮ್ಮೆಗಳ ಹತ್ಯೆಗೆ ಷರತ್ತುಬದ್ಧ ಒಪ್ಪಿಗೆ ಇದೆ. ಸಂಬಂಧಿಸಿದ ಸಂಸ್ಥೆಗಳ ಅನುಮತಿ ಕಡ್ಡಾಯ.
 

Follow Us:
Download App:
  • android
  • ios