ವಾರ್ ರೂಂಗೆ ಸೂರ್ಯ, ಸಾರಿ ಎಂದು ಜಾರಿಕೊಳ್ಳಲು ಮುಂದಾದ ಅಧಿಕಾರಿಗಳು!
ವಾರ್ ರೂಂ ಗೆ ಸಂಸದ ತೇಜಸ್ವಿ ಸೂರ್ಯ ಭೇಟಿ/ ದಂಧೆಯ ಕರಾಳ ಮುಖವನ್ನು ಅನಾವರಣ ಮಾಡಿದ ಸಂಸದ/ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಬೇಡಿ/ ಬೆಡ್ ದಂಧೆ ಬಟಾಬಯಲು
ಬೆಂಗಳೂರು(ಮೇ 04) ಒಂದು ಕಡೆ ರೆಮಿಡಿಸಿವಿರ್ ಕಳ್ಳ ದಂಧೆ ನಡೆಯುತ್ತಿದೆ ಎಂಬುದಕ್ಕೆ ಸಿಎಂ ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ. ಇನ್ನೊಂದು ಕಡೆ ವಾರ್ ರೂಂಗೆ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ರೆಮಿಡಿಸಿವಿರ್ ದಂಧೆ ಮಾಡ್ತೀರಾ?' ಬಿಎಸ್‌ವೈ ಗುಡುಗಿಗೆ ಬೆವೆತ ಅಧಿಕಾರಿಗಳು
15 -20 ದಿನಗಳಿಂದ ನಗರದ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಪರದಾಡುತ್ತಿದ್ದಾರೆ. . ಯಾವ ಆಸ್ಪತ್ರೆ ಹಾಗೂ ವಾರ್ ರೂಂ ಗೆ ಕಾಲ್ ಮಾಡಿದ್ರೂ ಬೆಡ್ ಇಲ್ಲ ಅಂತಾರೆ ಯಾಕೆ ಬೆಡ್ ಖಾಲಿಯಾಗಿದೆ ಅಂದ್ರೆ ಇಲ್ಲಿ ಅವ್ಯವಹಾರ ನಡಿತೀದೆ. . ಕೋವಿಡ್ ಪೇಷೆಂಟ್ ಗಳಿಗೆ ಬಿಯು ನಂ ಜನರೇಟ್ ಆಗಿ ಬಿಬಿಎಂಪಿಯಿಂದ ಕಾಲ್ ಹೋಗತ್ತೆ. ಯಾರು ಹೋಂ ಐಸೋಲೆಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಾರೋ ಅವರ ಹೆಸರಲ್ಲಿ ಬೆಡ್ ಅಲರ್ಟ್ ಆಗತ್ತೆ ಆ ಪೇಷೆಂಟ್ ಗಳಿಗೆ ಬ್ಲಾಕ್ ಮಾಡಿ ಬೇರೊಬ್ಬರಿಗೆ ಬೆಡ್ ನೀಡ್ತಿದ್ದಾರೆ. ಆ ಬೆಡ್ ಖಾಲಿ ಇರತ್ತೆ ಅದರಲ್ಲಿ 12 ಗಂಟೆಗಳ ಸಮಯ ಇರತ್ತೆ. ಅಂತಹ ಸಮಯದಲ್ಲಿ ದುಡ್ಡಿಗೆ ಮಾರಾಟ ಮಾಡಿಕೊಳ್ತಿದ್ದಾರೆ. ನನ್ನ ಬಳಿ ಎಲ್ಲ ದಾಖಲೆಗಳಿವೆ ಇಂಥ ವ್ಯವಹಾರ ಇಲ್ಲಿಗೆ ಕೊನೆಯಾಗಬೇಕು ಎಂದು ಕಟ್ಟಪ್ಪಣೆ ಮಾಡಿದರು.