ವ್ಯಾಕ್ಸಿನ್ ಪಡೆಯಲು ಹಳ್ಳಿಗಳತ್ತ ಸಾಗಿದ ಬೆಂಗಳೂರು ಜನ

  • ವ್ಯಾಕ್ಸಿನ್ ಪಡೆದುಕೊಳ್ಳಲು ಬೆಂಗಳೂರಿನಿಂದ ಹಳ್ಳಿಗಳತ್ತ ಮುಖ ಮಾಡಿದ ಜನ
  • ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ತೆರಳಿದ ಬೆಂಗಳೂರಿಗರು
  • ವಿಳಾಸ ನೋಡಿ ವಾಪಸ್ ಕಳುಹಿಸಿದ ಆರೋಗ್ಯಾಧಿಕಾರಿಗಳು

 

First Published May 25, 2021, 2:28 PM IST | Last Updated May 25, 2021, 2:28 PM IST

ಚಿಕ್ಕಬಳ್ಳಾಪುರ (ಮೇ.25): ಕೊರೋನಾ ಮಹಾಮಾರಿ ಏರುತ್ತಲೇ ಇದೆ. ಕೋವಿಡ್ ನಿಯಂತ್ರಣಕ್ಕೆ ಸಾಧನ ಎಂದರೆ ಅದು ವ್ಯಾಕ್ಸಿನ್. ವ್ಯಾಕ್ಸಿನ್ ಪಡೆಯಲು ಈಗ ಎಲ್ಲೆಡೆ ರಶ್ ಆಗುತ್ತಿದೆ. ಬೆಂಗಳೂರಿಗರು ವ್ಯಾಕ್ಸಿನ್‌ಗಾಗಿ ಹಳ್ಳಗಳತ್ತ ಮುಖ ಮಾಡುತ್ತಿದ್ದಾರೆ. 

ಲಸಿಕೆಗಾಗಿ ಸಮೀಪದ ಹಳ್ಳಿಗಳನ್ನು ಆಶ್ರಯಿಸುತ್ತಿರುವ ಬೆಂಗಳೂರಿಗರು .

ಚಿಕ್ಕಬಳ್ಳಾಪುರಕ್ಕೆ ವ್ಯಾಕ್ಸಿನ್ ಪಡೆಯಲು ಬೆಂಗಳೂರಿನಿಂದ ಬಂದಿದ್ದು, ಆರೋಗ್ಯ ಕೇಂದ್ರದ ಮುಂದೆ ಸಾಲು ಸಾಲುಗಟ್ಟಿ ನಿಂತಿದ್ದಾರೆ. ಇದರಿಂದ ಹಳ್ಳಿಗರಿಗೆ ವ್ಯಾಕ್ಸಿನ್ ಪಡೆಯಲು ತೀವ್ರ ತೊಂದರೆಯುಂಟಾಗಿದ್ದು, ಅವರನ್ನೆಲ್ಲಾ ವಿಳಾಸ ನೊಡು ವಾಪಸ್ ಕಳಿಸಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona