10 ವರ್ಷದ ಶುಲ್ಕ ಪಾವತಿಸಲು ಸುತ್ತೋಲೆ: ಖಾಸಗಿ ಶಾಲೆಯ ಹಗಲು ದರೋಡೆ?

ಬೆಂಗಳೂರಿನ ಖಾಸಗಿ ಶಾಲೆ ಆದೇಶವು ವಿವಾದ ಸೃಷ್ಟಿಸಿದ್ದು, 10 ವರ್ಷದ ಶುಲ್ಕ ಮುಂಗುಡವಾಗಿ ಪಾವತಿಸಲು ಸುತ್ತೋಲೆ ಹೊರಡಿಸಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರಿನಲ್ಲಿ ಖಾಸಗಿ ಶಾಲೆಯು ಶುಲ್ಕದ ಹೆಸರಿನಲ್ಲಿ ಸುಲಿಗೆಗೆ ಇಳಿಯಿತಾ ಎಂಬ ಪ್ರಶ್ನೆ ಮೂಡಿದ್ದು, ಹೆವಿಬ್‌ಗಯಾರ್‌ ಶಾಲಾ ಆಡಳಿತ ಮಂಡಳಿಯ ನೋಟಿಸ್‌ ಚರ್ಚೆಗೆ ಗ್ರಾಸವಾಗಿದೆ. ಪ್ರತಿಷ್ಠಿತ ಶಾಲಾ ಆಡಳಿತ ಮಂಡಳಿಯಿಂದ ಹಗಲು ದರೋಡೆ ನಡೆದಿದ್ದು, 10 ವರ್ಷದ ಶುಲ್ಕ ಪಾವತಿಸುವಂತೆ ಪೋಷಕರಿಗೆ ನೋಟಿಸ್‌ ನೀಡಲಾಗಿದೆ. ವಿಬ್‌ಗಯಾರ್‌ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಹೊಸ ಸುತ್ತೋಲೆ ಕಂಡು ಪೋಷಕರು ಕಕ್ಕಾಬಿಕ್ಕಿಯಾಗಿದ್ದಾರೆ.

Related Video