
ಭ್ರಷ್ಟಾಚಾರದ ಹಣದಲ್ಲಿ ಭವ್ಯ ಬಂಗಲೆ ನಿರ್ಮಾಣ: ರೋಹಿಣಿ ವಿರುದ್ಧ ರೂಪಾ ಆರೋಪ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವಿನ ಟಾಕ್ ವಾರ್ ಮುಂದುವರಿದಿದ್ದು, ರೋಹಿಣಿ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತೊಂದು ಆರೋಪವನ್ನು ಮಾಡಿದ್ದಾರೆ. ಯಲಹಂಕ ಬಳಿ ರೋಹಿಣಿ ಕುಟುಂಬಸ್ಥರಿಂದ ಬಂಗಲೆ ನಿರ್ಮಾಣ ಮಾಡಿದ್ದು, ಭ್ರಷ್ಟಾಚಾರದ ಹಣದಲ್ಲಿ ಭವ್ಯ ಬಂಗಲೆ ನಿರ್ಮಾಣ ಮಾಡಲಾಗಿದೆ ಎಂದು ಡಿ. ರೂಪಾ ಆರೋಪಿಸಿದ್ದಾರೆ. ರೋಹಿಣಿ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಲು ರೂಪಾ ಆಗ್ರಹಿಸಿದ್ದು, ಯಲಹಂಕದ ಸೆಂಚುರಿ ಲೇಔಟ್'ನಲ್ಲಿ ಬಂಗಲೆ ನಿರ್ಮಾಣ ಮಾಡಲಾಗಿದೆ.