Bengaluru: ಪಾರ್ಕಿಂಗ್ ವಿಚಾರಕ್ಕೆ ನಡು ರಸ್ತೆಯಲ್ಲೇ ಎಎಸ್‌ಐ, ಅಂಗವಿಕಲೆ ಮಾರಾಮಾರಿ!
*ಪಾರ್ಕಿಂಗ್ ವಿಚಾರಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ!
*ಟೋಯಿಂಗ ಸಿಬ್ಬಂದಿ ಜತೆ ಮಂಜುಳಾ ವಾಗ್ವಾದ
*ಅಂಗವಿಕಲೆಯನ್ನು ಮನಬಂದಂತೆ ಥಳಿಸಿದ ಎಎಸ್‌ಐ
ಬೆಂಗಳೂರು (ಜ. 30): ಅಂಗವಿಕಲೆ ಮಹಿಳೆಗೆ ಎಎಸ್‌ಐ ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಂಗವಿಕಲೆ ಮಂಜುಲಾ ನೋ ಪಾರ್ಕಿಂಗ್‌ನಲ್ಲಿ (No Parking) ತಮ್ಮ ವಾಹನವನ್ನು ನಿಲ್ಲಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದ ಟೋಯಿಂಗ ಸಿಬ್ಬಂದಿ (Towing Staff) ಜತೆ ಮಂಜುಳಾ ವಾಗ್ವಾದ ನಡೆಸಿದ್ದಾರೆ ಅಲ್ಲದೇ ಎಎಸ್‌ಐ ನಾರಾಯಣ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಎಎಸ್‌ಐ ಕೋಪಗೊಂಡು ಮಹಿಳೆಗೆ ಶೂ ಕಾಲಿನಿಂದ ತುಳಿದಿದ್ದಾರೆ. ಪಾರ್ಕಿಂಗ್ ವಿಚಾರಕ್ಕೆ ನಡು ರಸ್ತೆಯಲ್ಲಿ ಮಾರಾಮಾರಿ ನಡೆದಿದೆ. ಅಂಗವಿಕಲ ಮಹಿಳೆಯನ್ನು ಎಎಸ್‌ಐ ಮನಬಂದಂತೆ ಥಳಿಸಿದ್ದಾರೆ.
ಇದನ್ನೂ ಓದಿ: Bengaluru:ಲವ್ ಮ್ಯಾರೇಜ್, ವರದಕ್ಷಿಣೆ ಕಿರುಕುಳ, ಮನಬಂದಂತೆ ಥಳಿಸಿದ ಪತಿ
ಎಎಸ್‌ಐ ನಾರಾಯಣ್ ಕಣ್ಣಿನ ಬಳಿ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಕೋಪಗೊಂಡ ಪೋಲೀಸ್ ನಡುರಸ್ತೆಯಲ್ಲೇ ಮಹಿಳಗೆ ಥಳಿಸಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಪೋಲಿಸ್ ಮತ್ತು ಅಂಗವಿಕಲ ಮಹಿಳೆ ನಡುವಿನ ಜಗಳವನ್ನು ತಡೆಯಲು ಯತ್ನಸಿದ್ದಾರೆ. ಈ ಸಂಬಂಧ ಎಸ್ ಜೆ ಪಾರ್ಕ್ ಪೊಲೋಇಸ್ ಠಾಣೆಯಲ್ಲಿ ದೂರು ದಾಖಲಾಗಿದೆ.