
Bengaluru: ನ್ಯೂ ಇಯರ್ ಸೆಲೆಬ್ರೇಶನ್‌ಗೆ ಬೆಂಗಳೂರು ಸಜ್ಜು: ಎಂ.ಜಿ. ರೋಡ್‌ನಲ್ಲಿ ಖಾಕಿ ಅಲರ್ಟ್
ಬೆಂಗಳೂರಿನ ಎಂ.ಜಿ ರೋಡಿನಲ್ಲಿ ದೊಡ್ಡ ಮಟ್ಟದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದೆ.
ಬೆಂಗಳೂರು; ನ್ಯೂ ಇಯರ್ ಸೆಲೆಬ್ರೇಶನ್'ಗೆ ಸಿಲಿಕಾನ್ ಸಿಟಿ ಸಿದ್ಧವಾಗಿದ್ದು, ಖಾಕಿ ಫುಲ್ ಅಲರ್ಟ್ ಆಗಿದೆ. ಮಹಿಳೆಯರ ಸುರಕ್ಷತೆಗೆ ಹಾಗೂ ಗಲಾಟೆಗಳು ನಡೆಯದಂತೆ ಪ್ಲಾನಿಂಗ್ ಮಾಡಲಾಗಿದ್ದು, ಅಂಬ್ರೆಲ್ಲಾ ಕ್ಯಾಂಪ್ ಹಾಕಲಾಗಿದೆ. ಹೊಸ ಪ್ಲಾನ್'ನಲ್ಲಿ ಭದ್ರತಾ ವ್ಯವಸ್ಥೆ ಮಾಡಲಿರೋ ಸೆಂಟ್ರಲ್ ಡಿಸಿಪಿ, ಮೂರು ಪ್ಲಾನ್ ಮೂಲಕ ಸೆಲೆಬ್ರೇಷನ್ ಕಂಟ್ರೋಲ್‌ಗೆ ಖಾಕಿ ಚಿಂತನೆ ನಡೆಸಿದೆ. ಬ್ರಿಗೇಡ್, ಎಂ.ಜಿ ರೋಡ್ ಬೆಂಗಳೂರಿನ ಸೆಲೆಬ್ರೆಷನ್ ಸ್ಪಾಟ್ಸ್'ಗಳಾಗಿದ್ದು, ಸೆಕ್ಯೂರಿಟಿ ಏಜೆನ್ಸಿಗಳನ್ನು ಸಂಪರ್ಕ ಮಾಡಲಾಗಿದೆ. ಕ್ಯಾಬ್‌ಗಳ ಡ್ರೈವರ್‌ಗಳಿಗೂ ಡಿಸಿಪಿ ವಿಶೇಷ ಎಚ್ಚರಿಕೆ ನೀಡಿದ್ದು, ಯುವಕ ಯುವತಿಯರ ಜೊತೆ ಸಭ್ಯವಾಗಿರಲು ಸೂಚನೆ ನೀಡಲಾಗಿದೆ. ಬ್ರಿಗೇಡ್ ಹಾಗೂ ಎಂ.ಜಿ ರೋಡ್'ನಲ್ಲಿ ನೂರು ಮೀಟರ್'ಗೆ ಒಂದರಂತೆ ಅಂಬ್ರೆಲ್ಲಾ ಕ್ಯಾಂಪ್ ಹಾಕಲಾಗಿದ್ದು, ನಾಲ್ವರು ಪುರುಷ ಓರ್ವ ಮಹಿಳಾ ಸಿಬ್ಬಂದಿ ಇರಲಿದ್ದಾರೆ. ಏನೇ ಸಮಸ್ಯೆ ಆದ್ರೂ ಕೂಡಲೇ ಪೊಲೀಸರು ಅಲರ್ಟ್ ಆಗುತ್ತಾರೆ.