ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು: ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌ ಹೇಗಿದೆ ನೋಡಿ...

ಕೊರೋನಾ ಆತಂಕದ ನಡುವೆ ಸಿಲಿಕಾನ್ ಸಿಟಿ ಬೆಂಗಳೂರು ಹೊಸ ವರ್ಷಚಾರಣೆಗೆ ಸಜ್ಜಾಗಿದ್ದು, ಇನ್ನೊಂದು ವಾರ ಬಾಕಿಯಿದೆ. ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌ ಈಗಾಗಲೇ ಅಲಂಕಾರಗೊಂಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.23): ಕೊರೋನಾ ಆತಂಕದ ನಡುವೆ ಸಿಲಿಕಾನ್ ಸಿಟಿ ಬೆಂಗಳೂರು ಹೊಸ ವರ್ಷಚಾರಣೆಗೆ ಸಜ್ಜಾಗಿದ್ದು, ಇನ್ನೊಂದು ವಾರ ಬಾಕಿಯಿದೆ. ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌ ಈಗಾಗಲೇ ಅಲಂಕಾರಗೊಂಡಿದೆ. ವಿಶೇಷವಾಗಿ ವಿದ್ಯುತ್ ದೀಪಾಲಂಕಾರದ ನಡುವೆ ಜನ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದು, ನಗರದ ಹೋಟೆಲ್‌, ರೆಸ್ಟೋರೆಂಟ್‌, ಕ್ಲಬ್‌, ಬಾರ್‌, ಬ್ರಿಗೇಡ್‌ ರಸ್ತೆ ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿ ಅದ್ಧೂರಿಯಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರವೂ ಕಾರ್ಯಕ್ರಮ ನಡೆಸಲು, ಪಾರ್ಟಿ ಆಯೋಜಿಸಲು, ಭೋಜನ ಕೂಟ ನಡೆಸಲು ಅವಕಾಶ ನೀಡಿದೆ. ಇದರಿಂದ ನಗರದ ಹೋಟೆಲ್‌, ಕ್ಲಬ್‌, ರೆಸ್ಟೋರೆಂಟ್‌, ಅಂಗಡಿ ಮುಂಗಟ್ಟುಗಳು ಭರ್ಜರಿ ವ್ಯಾಪಾರ ನಡೆಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರೂ ಕೂಡ ಪಾರ್ಟಿ ನಡೆಸುವ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆ, ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video