ಕೂಲಿ ಕಾರ್ಮಿಕನ ಜೇಬಿಗೆ ಬರೆ ಎಳೆದ ಬೆಸ್ಕಾಂ: ಶೀಟ್ ಮನೆಗೆ 22 ಸಾವಿರ ಬಿಲ್

ಕೂಲಿ ಕಾರ್ಮಿಕನ ಶೀಟ್ ಮನೆಗೆ ಬರೋಬ್ಬರಿ 22 ಸಾವಿರ ರೂಪಾಯಿ ಕರೆಂಟ್ ಬಿಲ್ ನೀಡಿ, ಬಡವರ ಜೇಬಿಗೆ ಬೆಸ್ಕಾಂ ಬರೆ ಎಳೆದಿದೆ.

First Published Oct 31, 2022, 10:50 AM IST | Last Updated Oct 31, 2022, 10:50 AM IST

ಬನ್ನೇರುಘಟ್ಟ ರಸ್ತೆಯ ದೊಡ್ಡ ಕಮ್ಮನಹಳ್ಳಿಯಲ್ಲಿರುವ ಶೀಟ್ ಮನೆಯೊಂದಕ್ಕೆ, ಬೆಸ್ಕಾಂ ಮನೆಗೆ 22 ಸಾವಿರ ಕರೆಂಟ್‌ ಬಿಲ್‌ ನೀಡಿದೆ. ಪ್ರತಿ ಸಾರಿ ಮಾಮೂಲಿಯಾಗಿ 219, 241 ಹಾಗೂ 265 ರೂ. ಬರುತ್ತಿದ್ದ ಕರೆಂಟ್‌ ಬಿಲ್‌, ಸೆಪ್ಟೆಂಬರ್‌ ತಿಂಗಳಲ್ಲಿ 22 ಸಾವಿರ ರೂಪಾಯಿ ಬಂದಿದೆ. ತನ್ನ ಮನೆಯ ಕರೆಂಟ್‌ ಬಿಲ್ ನೋಡಿ ಕೂಲಿ ಕಾರ್ಮಿಕನು ಕಂಗಾಲ್ ಆಗಿದ್ದಾನೆ. ಈ ಕುರಿತು ಬೆಸ್ಕಾಂ ಇಲಾಖೆಗೆ ದೂರು ನೀಡಿದ್ದು, ಆದರೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ.

ರಕ್ತ ಸಂಬಂಧಿಗಳ ಸಂಬಂಧ ನಿರ್ಬಂಧಕ್ಕೆ ಕಾನೂನಿಲ್ಲ; ಹೈಕೋರ್ಟ್