ಬೆಂಗಳೂರು : ಈಗ ವ್ಯಾಕ್ಸಿನೇಷನ್ ಅಂತರದ ಗೊಂದಲ

  • ಬೆಂಗಳೂರು ವ್ಯಾಕ್ಸಿನ್ ಸೆಂಟರ್ ನಲ್ಲಿ ಗೊಂದಲ
  • ಕೊ ವ್ಯಾಕ್ಸಿನ್ ಗೆ 28 ದಿನ ಕಳೆದಿರ್ಬೇಕು ಅಂತ ಮೊದಲು ಹೇಳಿದ್ದು ಈಗ 45 ದಿನವೆಂದ ಸಿಬ್ಬಂದಿ 
  •  ಈ ವಿಚಾರಕ್ಕೆ ಆಸ್ಪತ್ರೆ ಮತ್ತು ಸಾರ್ವಜನಿಕರ ನಡುವ ಮಾತಿನ ಚಕಮಕಿ
First Published May 15, 2021, 12:39 PM IST | Last Updated May 15, 2021, 12:39 PM IST

ಬೆಂಗಳೂರು (ಮೇ.15): ಬೆಂಗಳೂರಿನಲ್ಲಿ ವ್ಯಾಕ್ಸಿನ್ ಸೆಂಟರ್ ನಲ್ಲಿ ಗೊಂದಲ ಮನೆ ಮಾಡಿದೆ. ಕೊ ವ್ಯಾಕ್ಸಿನ್ ಗೆ 28 ದಿನ ಕಳೆದಿರ್ಬೇಕು ಎಂದು ಮೊದಲು ಹೇಳಿದ್ದು ಈಗ ಮತ್ತೆ ಗ್ಯಾಪ್ ಇನ್ನಷ್ಟು ಏರಿಕೆ ಮಾಡಿದ್ದಾರೆ. 

ಕೋವಿ​ಶೀಲ್ಡ್‌ ಲಸಿಕೆ ಅಂತರ 6-8 ವಾರಕ್ಕೆ ಬದಲಿಸಲು ಸೂಚನೆ! .

ಜನರು ಲಸಿಕೆ ಪಡೆಯಲು ಕ್ಯೂ ನಿಂತು ಗಂಟೆ ಗಟ್ಟಲೆ ಕಾದಮೇಲೆ 45 ದಿನ ಆಗಿರಬೇಕು ಎಂದು ಹೇಳುತ್ತಿದ್ದಾರೆ.  ಈ ವಿಚಾರವಾಗಿ ಆಸ್ಪತ್ರೆ ಮುಂದೆ ಗೊಂದಲ ಉಂಟಾಗಿದೆ.  ಪೋರ್ಟಲ್  ನಲ್ಲಿ ರಿಸಿವ್ ಆದ್ರೆ ವ್ಯಾಕ್ಸಿನ್ ಕೊಡುತ್ತೇವೆ ಎಂದು ಸಿಬ್ಬಂದಿ ಹೇಳುತ್ತಿದ್ದು ಈ ವಿಚಾರಕ್ಕೆ ಆಸ್ಪತ್ರೆ ಮತ್ತು ಸಾರ್ವಜನಿಕರ ನಡುವ ಮಾತಿನ ಚಕಮಕಿ ನಡೆದಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Read More...