ನವ​ದೆ​ಹ​ಲಿ(ಮಾ.23): ಇನ್ನು ಮುಂದಿನ ದಿನ​ಗ​ಳಲ್ಲಿ ಕೋವಿ​ಶೀಲ್ಡ್‌ ಲಸಿ​ಕೆಯ ಮೊದಲ ಡೋಸ್‌ ಪಡೆ​ದ​ವ​ರಿಗೆ 4ರಿಂದ 6 ವಾರ​ಗಳ ಅಂತ​ರ​ದ ಬದ​ಲಿಗೆ 6ರಿಂದ 8 ವಾರ​ಗಳ ಅಂತ​ರ​ದಲ್ಲಿ 2ನೇ ಡೋಸ್‌ ನೀಡ​ಲಾ​ಗು​ತ್ತದೆ. ಈ ಸಂಬಂಧ ರಾಜ್ಯ​ಗಳು ಮತ್ತು ಕೇಂದ್ರಾ​ಡ​ಳಿತ ಪ್ರದೇ​ಶ​ಗ​ಳಿಗೆ ಕೇಂದ್ರ ಸರ್ಕಾರ ಪತ್ರ ಮುಖೇನ ಸೂಚನೆ ನೀಡಿದೆ.

ಕೋವಿ​ಶೀಲ್ಡ್‌ ಲಸಿ​ಕೆಯ ಮೊದಲ ಡೋಸ್‌ ಪಡೆ​ದ ಫಲಾ​ನು​ಭ​ವಿ​ಗ​ಳಿಗೆ 6ರಿಂದ 8 ವಾರ​ಗಳ ಅಂತ​ರ​ದಲ್ಲಿ 2ನೇ ಡೋಸ್‌ ನೀಡ​ಬೇಕು. ಇದ​ರಿಂದ ಲಸಿ​ಕೆಯ ಪರಿ​ಣಾ​ಮ​ ಮತ್ತಷ್ಟುಹೆಚ್ಚ​ಲಿದೆ ಎಂಬುದು ವೈಜ್ಞಾ​ನಿಕ ಅಧ್ಯಯನದಿಂದ ದೃಢ​ಪ​ಟ್ಟಿದೆ. ಈ ಹಿನ್ನೆ​ಲೆ​ಯ​ಲ್ಲಿ ಕೊರೋನಾ ಲಸಿಕೆ ಕುರಿ​ತಾದ ರಾಷ್ಟ್ರೀಯ ತಜ್ಞರ ಗುಂಪಿನ 20ನೇ ಸಭೆ​ಯಲ್ಲಿ 2ನೇ ಡೋಸ್‌ ಲಸಿ​ಕೆಯ ಅವ​ಧಿ​ಯನ್ನು ಪರಿ​ಷ್ಕ​ರಿ​ಸ​ಲಾ​ಗಿದೆ. ಆದರೆ ಇದು ದೇಶೀಯ ಕೋವ್ಯಾ​ಕ್ಸಿನ್‌ ಲಸಿ​ಕೆಗೆ ಅನ್ವ​ಯಿ​ಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಸ್ತುತ ದೇಶಾ​ದ್ಯಂತ 60 ವರ್ಷ ಮೇಲ್ಪಟ್ಟಮತ್ತು ಕಾಯಿಲೆಪೀಡಿತ 45 ವರ್ಷ ಮೇಲ್ಪ​ಟ್ಟವ​ರಿಗೆ ದೇಶೀ​ಯ​ ಕೋವ್ಯಾ​ಕ್ಸಿನ್‌ ಮತ್ತು ಬ್ರಿಟ​ನ್‌ನ ಕೋವಿ​ಶೀ​ಲ್ಡ್‌ ಲಸಿಕೆಯನ್ನು ನೀಡ​ಲಾ​ಗು​ತ್ತಿದೆ.