ಹನಿ ನೀರಿಗಾಗಿ ಹಾಹಾಕಾರ: ನಮಗೆ ನಿಮ್ಮ ಗ್ಯಾರಂಟಿಗಳು ಬೇಡ, ಕುಡಿಯಲು ನೀರು ಕೊಡಿ ಎನ್ನುತ್ತಿರುವ ಜನ..!
ಬಳ್ಳಾರಿ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಹನಿ ನೀರಿಗಾಗಿ ಜನ ಪರದಾಡುತ್ತಿದ್ದಾರೆ.
ಬಳ್ಳಾರಿ: ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಒಂದು ಕೊಡ ನೀರಿಗಾಗಿ ಎರಡು ಕಿ.ಮೀ. ನಡೆದುಕೊಂಡು ಹೋಗುವ ಅನಿವಾರ್ಯತೆ ಉಂಟಾಗಿದೆ. ನೀರಿಗಾಗಿ ಮಕ್ಕಳು ಮಹಿಳೆಯರು ಪರದಾಡುತ್ತಿದ್ದಾರೆ. ಕುಡಿಯುವ ನೀರಿನ ಘಟಕ ಇದ್ದರೂ, ಕರೆಂಟ್ ಇಲ್ಲದ ಕಾರಣ ನೀರು ಸಿಗುತ್ತಿಲ್ಲ. ನದಿಗಳು ಬತ್ತಿ ಹೋಗಿದ್ದರಿಂದ, ಹಳ್ಳವನ್ನು ಅಗೆದು ನೀರನ್ನು ತರುತ್ತಿದ್ದಾರೆ. ಅಲ್ಲದೇ ತುಂಗಭದ್ರಾ ಮತ್ತು ವೇದಾವತಿ ಜಲಾಶಯ ಸಂಪೂರ್ಣ ಖಾಲಿ ಖಾಲಿಯಾಗಿವೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಪರದಾಟ ಶುರುವಾಗಿದೆ.
ಇದನ್ನೂ ವೀಕ್ಷಿಸಿ: Today Rashibhavishy: ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ, ಇಂದು ಸೂರ್ಯನ ಆರಾಧನೆ ಮಾಡಿ