
ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿದ ಸಿಎಂ: ಗ್ರಾಮಸ್ಥರಿಗೆ ತಕ್ಷಣ ಬೋಟ್ ವ್ಯವಸ್ಥೆ ಮಾಡಲು ಸೂಚನೆ
ಪ್ರವಾಹದ ಸಂದರ್ಭದಲ್ಲಿ ಜನರು ತಮ್ಮ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ನೀರಿನಲ್ಲಿ ಸಂಚಾರ ಮಾಡುತ್ತಿರುವ ಜನರು| ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ನಡೆದ ಘಟನೆ| ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿ ಬೋಟ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ ಸಿಎಂ|
ಬೆಳಗಾವಿ(ಆ.22): ಸುವರ್ಣ ನ್ಯೂಸ್ ವರದಿಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಜನರು ಪ್ರವಾಹದ ಸಂದರ್ಭದಲ್ಲಿ ಜನರು ತಮ್ಮ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ನೀರಿನಲ್ಲಿ ಸಂಚಾರ ಮಾಡುತ್ತಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಡಿಸಿಎಂ ಲಕ್ಷ್ಮಣ ಸವದಿ ತವರಲ್ಲಿ ನೆರೆಯಿಂದ ನರಳಾಟ: ಜೀವ ಕೈಯಲ್ಲಿ ಹಿಡಿದು ಡೇಂಜರಸ್ ಪ್ರಯಾಣ
ಈ ಬಗ್ಗೆ ಸುವರ್ಣ ನ್ಯೂಸ್ ವರದಿಯನ್ನ ಪ್ರಸಾರ ಮಾಡಿತ್ತು. ವರದಿ ಬಳಿಕ ಸಿಎಂ ಯಡಿಯೂರಪ್ಪ ಬೆಳಗಾವಿ ಜಿಲ್ಲಾಧಿಕಾರಿಗೆ ಕರೆ ಮಾಡಿ ಗ್ರಾಮಸ್ಥರಿಗೆ ಓಡಾಡಲು ತಕ್ಷಣ ಬೋಟ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.