BBMP: ಟ್ರಾನ್ಸ್‌ಫರ್ ಸ್ಟೇಷನ್ ನೆಪದಲ್ಲಿ ₹180 ಕೋಟಿ ಹಾಳು ಮಾಡಲು ಮುಂದಾದ ಬಿಬಿಎಂಪಿ?
ಬೆಂಗಳೂರು ಜನರು ಪಾವತಿಸಿರುವ ಹಣಕ್ಕೆ ಬೆಲೇನೆ ಇಲ್ಲವಾಗಿದೆ. ಈ ಮೂಲಕ ಬಿಬಿಎಂಪಿ ಜನರ ಟ್ಯಾಕ್ಸ್ ಪೋಲು ಮಾಡುತ್ತಿದೆ.
ಬೆಂಗಳೂರು(ಸೆ.03): ಖಾಸಗಿ ಕಂಪನಿಗೆ 300 ಕೋಟಿಯ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಆದೇಶಿಸಿದೆ. ವಾರ್ಡ್‌ಗಳ ಕಸ ಒಂದೆಡೆ ಸುರಿಯಲು ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣಕ್ಕೆ ಬಿಬಿಎಂಪಿ ಆದೇಶಿಸಿದೆ. ಟ್ರಾನ್ಸ್‌ಫರ್ ಸ್ಟೇಷನ್ ನೆಪದಲ್ಲಿ ₹180 ಕೋಟಿ ಹಾಳು ಮಾಡಲು ಮುಂದಾದ ಬಿಬಿಎಂಪಿ? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ಬೆಂಗಳೂರು ಜನರು ಪಾವತಿಸಿರುವ ಹಣಕ್ಕೆ ಬೆಲೇನೆ ಇಲ್ಲವಾಗಿದೆ. ಈ ಮೂಲಕ ಬಿಬಿಎಂಪಿ ಜನರ ಟ್ಯಾಕ್ಸ್ ಪೋಲು ಮಾಡುತ್ತಿದೆ. ಮಳೆಯಿಂದ ಕಂಗೆಟ್ಟಿರುವ ಜನರಿಗೆ ಪರಿಹಾರ ನೀಡುವಲ್ಲಿ ಬಿಬಿಎಂಪಿ ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ಬಿಬಿಎಂಪಿ ನಡೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜೈಲುವಾಸ ತಪ್ಪಿಸಲು ಎದೆನೋವು ನಾಟಕ ಆಡಿದರಾ ಮುರುಘಾ ಶ್ರೀ, ಇಲ್ಲಿದೆ ಪೋಕ್ಸೋ ಕೇಸ್ ಸಂಪೂರ್ಣ ವಿವರ!