Asianet Suvarna News Asianet Suvarna News

ಜೈಲುವಾಸ ತಪ್ಪಿಸಲು ಎದೆನೋವು ನಾಟಕ ಆಡಿದರಾ ಮುರುಘಾ ಶ್ರೀ, ಇಲ್ಲಿದೆ ಪೋಕ್ಸೋ ಕೇಸ್ ಸಂಪೂರ್ಣ ವಿವರ!

ಮರುಘಾ ಮಠದ ಶ್ರೀಗಳನ್ನು ಬಂಧನದಿಂದ ರಕ್ಷಿಸಲು ಆಸ್ಪತ್ರೆ ಪ್ಲಾನ್ ಮಾಡಲಾಗಿತ್ತಾ?  ಸ್ವತಃ ಶ್ರೀಗಳನ್ನು ಹಾಗೂ ವೈದ್ಯರು ಕೋರ್ಟ್‌ಗೆ ಹಾಜರಾಗಲು ಹೇಳಿದ ನ್ಯಾಯಾಧೀಶರು ಯಾವುದೇ ಹೈಡ್ರಾಮಕ್ಕೆ ಅವಕಾಶ ನೀಡದೆ ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಕುರಿತು ಚಿತ್ರುದುರ್ಗದ ಕೋರ್ಟ್‌ನಲ್ಲಿ  ನಡೆದೆ ಇಂಚಿಂಚು ವಾದ ವಿವಾದ ಇಲ್ಲಿದೆ.

Sep 2, 2022, 11:02 PM IST

ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಮರುಘಾ ಮಠದ ಶಿವಮೂರ್ತಿ ಸ್ವಾಮಿಜಿಗಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಆದರೆ ಜೈಲುವಾಸ ತಪ್ಪಿಸಲು ಇಂದು ಬೆಳಗ್ಗೆ ಮುರುಘಾ ಶ್ರೀ ಎದೆನೋವು ಎಂದು ಕುಸಿದು ಬಿದ್ದಿದ್ದರು. ಪೊಕ್ಸೋ ಕೇಸ್ ಅಡಿಯಲ್ಲಿ ಅರೆಸ್ಟ್ ಆಗಿದ್ದ ಮುರುಘಾ ಶ್ರೀಗಳು ವೀಲ್ ಚೇರ್ ಮೂಲಕ ಆಸ್ಪತ್ರೆ ದಾಖಲಾಗಿದ್ದರು. ಆದರೆ ಕೋರ್ಟ್ ತಪರಾಕಿ ಬೆನ್ನಲ್ಲೇ ಶ್ರೀಗಳು ನಡೆದುಕೊಂಡೇ ಶ್ರೀಗಳು ಕೋರ್ಟ್‌ಗೆ ಹಾಜರಾಗಿದ್ದಾರೆ.  ಇದರ ನಡುವೆ ಬೆಂಗಳೂರಿನ ಆಸ್ಪತ್ರೆ ದಾಖಲಿಸುವ ತಯಾರಿ ಕೂಡ ನಡೆದಿತ್ತು.  ಮುರುಘಾ ಶ್ರೀಗಳ ವಿರುದ್ದ ಮತ್ತೊಂದು ಕೇಸ್ ಬಿಗಿಯಾಗಿದೆ. ಇದೀಗ ಈ ಕೇಸ್ ಕುರಿತು ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಕೆಲವೇ ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ಎರಡು ವರ್ಷಗಳ ಹಿಂದೆ ಕೇಸ್ ದಾಖಲಾಗಿತ್ತು. ಆಸ್ಪತ್ರೆ ದಾಖಲಿಸಿದ ಪೊಲೀಸರಿಗೆ ನ್ಯಾಯಾಧೀಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇಂದು ನಡೆದ ಮಹಾ ಹೈಡ್ರಾಮ ವಿವರ ಇಲ್ಲಿವೆ.