ಕೊರೋನಾ ಆತಂಕ: BBMP ಸಿಬ್ಬಂದಿಯ ಯಡವಟ್ಟಿನಿಂದ ಟೆನ್ಷನ್ ಟೆನ್ಷನ್..!
ರಾಜಾರೋಷವಾಗಿ ಸುತ್ತಾಡುತ್ತಿರುವ ಕ್ವಾರಂಟೈನ್‌ನಲ್ಲಿರಬೇಕಾದ ಜನರು|ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಕ್ಕೆ ಬಂದ ಪ್ರಯಾಣಿಕರಿಗೆ ಕೈ ಮೇಲೆ ಕ್ವಾರಂಟೈನ್ ಸೀಲ್|ಸೀಲ್ ಹಾಕಿದ್ದವರಲ್ಲಿ ಮಾರಕ ಕೊರೋನಾ ಸೋಂಕು ಇದ್ರೆ ಯಾರು ಹೊಣೆ?|
ಬೆಂಗಳೂರು:(ಮೇ.24): ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕ್ವಾರಂಟೈನ್‌ನಲ್ಲಿರಬೇಕಾದ ಜನರು ಮಾತ್ರ ರಾಜಾರೋಷವಾಗಿ ಸುತ್ತಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ವಿವಿಧ ರಾಜ್ಯಗಳಿಂದ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಕ್ಕೆ ಬಂದ ಪ್ರಯಾಣಿಕರಿಗೆ ಕೈ ಮೇಲೆ ಕ್ವಾರಂಟೈನ್ ಸೀಲ್ ಹಾಕಲಾಗುತ್ತಿದೆ. ಹೀಗೆ ಸೀಲ್ ಹಾಕಿಸಿಕೊಂಡರು ಕ್ವಾರಂಟೈನ್ ಕೇಂದ್ರದಲ್ಲಿರಬೇಕು.
ಸುವರ್ಣ ಫೋಕಸ್: ಮಾಸ್ಕ್‌ಗಳೇ ಸಾವು ತರುತ್ತವೆ ಎಚ್ಚರ..!
ಆದರೆ, ಸೀಲ್ ಹಾಕಿಸಿಕೊಂಡವರು ರಸ್ತೆಯುದ್ದಕ್ಕೂ ಓಡಾಡುತ್ತಿದ್ದಾರೆ. ಸೀಲ್ ಹಾಕಿದ್ದವರಲ್ಲಿ ಮಾರಕ ಕೊರೋನಾ ಸೋಂಕು ಇದ್ರೆ ಯಾರು ಹೊಣೆ? ಇದಕ್ಕೆಲ್ಲಾ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.