ಬಸವನಗುಡಿ ಸಂಭ್ರಮ: ಫುಡ್, ಫನ್ ಆ್ಯಂಡ್ ಫ್ಯಾಷನ್ ಫೆಸ್ಟಿವಲ್‌ಗೆ ಭರ್ಜರಿ ರೆಸ್ಪಾನ್ಸ್

ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದೊಂದಿಗೆ ಬಸವನಗುಡಿ ಸಂಭ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಅತಿದೊಡ್ಡ  ಪುಡ್, ಫನ್ ಆ್ಯಂಡ್ ಫ್ಯಾಷನ್ ಫೆಸ್ಟಿವಲ್  ಬಸವನಗುಡಿಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.

First Published Mar 2, 2024, 10:01 AM IST | Last Updated Mar 2, 2024, 10:01 AM IST

ಬಸವನಗುಡಿಯ ಡೊಂಕಲ ಆಟದ ಮೈದಾನದಲ್ಲಿ‌ ಬಸವನಗುಡಿ ಸಂಭ್ರಮ ನಡೆಯುತ್ತಿದೆ. ಮಾರ್ಚ್‌ 3 ರ ವರೆಗೆ ನಡೆಯುತ್ತಿರುವ 'ಬಸವನಗುಡಿ ಸಂಭ್ರಮ'ಕ್ಕೆ(Basavanagudi Sambrama) ಶುಕ್ರವಾರ ಅದ್ದೂರಿ ಚಾಲನೆ ದೊರೆತಿದೆ. ಶಾಸಕ ರವಿ ಸುಬ್ರಮಣ್ಯ, ಬಿಗ್ ಬಾಸ್ ಖ್ಯಾತಿಯ ಈಶಾನಿ, ಕರ್ನಾಟಕ ಅಳಿಯ ಚಿತ್ರದ ನಟ ಪ್ರಥಮ್ ಹಾಗೂ ನಟಿ ನಿಖಿತಾ  ಕಾರ್ಯಕ್ರಮ ಉದ್ಘಾಟನೆ ಮಾಡಿದ್ರು. ಕಾರ್ಯಕ್ರಮದಲ್ಲಿ‌ ಪಾಲ್ಗೊಂಡ ನಟ ದುನಿಯಾ ವಿಜಿ (Duniya Vijay) ಕಾರ್ಯಕ್ರಮದ ಮೆರಗು ಹೆಚ್ವಿಸಿದ್ರು. ನಾನು ಬಸವನಗುಡಿಯವನಾಗಿದ್ದು, ಈ ರೀತಿಯ ಸಂಭ್ರಮದ ಕಾರ್ಯಕ್ರಮಗಳು ಬೆಂಗಳೂರಿನ ಮೆರಗನ್ನು ಹೆಚ್ವುಸುತ್ತವೆ ಎಂದು ಹೇಳಿದರು. 3 ದಿನ ನಡೆಯಲಿರುವ ಬಸವನಗುಡಿ  ಸಂಭ್ರಮದಲ್ಲಿ, 80ಕ್ಕೂ ಹೆಚ್ಚಿನ ಮಳಿಗೆಗಳನ್ನು ಹಾಕಲಾಗಿದ್ದು, ಶಾಪಿಂಗ್, ಈಟಿಂಗ್ ,ಚಾಟಿಂಗ್ ಒಂದೊಳ್ಳೆ ಡಿಫರೆಂಟ್ ಕಾರ್ಯಕ್ರಮ ನಿಮಗಾಗಿ ಆಯೋಜನೆಯಾಗಿದೆ. ಇನ್ನು‌ ರಾಜ್ಯದ ಬೇರೆ ಜಿಲ್ಲೆ ಸೇರಿದಂತೆ ರುಚಿಯಾದ ಸ್ಥಳೀಯ ತಿಂಡಿ, ತಿನಿಸುಗಳನ್ನು ಸವಿಯಬಹುದು. ಇನ್ನು  ಸಂಭ್ರಮದಲ್ಲಿ ಮಕ್ಕಳ ಖುಷಿ ಹೆಚ್ಚಿಸೋದಕ್ಕೆ ಹಲವು ಆಟಗಳು ಸಹ ಇವೆ. ಜೊತೆಗೆ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ಫ್ಯಾಷನ್, ಲೈಫ್ ಸ್ಟೈಲ್ ವಸ್ತುಗಳ ಖರೀದಿಸಲು ಹಾಗೂ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸ್ಪರ್ಧೆಗಳನ್ನ ಆಯೋಜಿಸಲಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಕಷ್ಟಗಳ ಪರಿಹಾರಕ್ಕೆ ಇಂದು ಶನಿದೇವನ ಆರಾಧನೆ ಮಾಡಿ..

Video Top Stories