ಬಾಂಗ್ಲಾ ಬೆಡಗಿಯ ಮೇಲೆ ಬಿದ್ದಿತ್ತು ಕಾಮದ ಕಣ್ಣು! ಅರ್ಧಗಂಟೆಯಲ್ಲಿ ಬರ್ತೀನಿ ಅಂದವಳು ನಾಪತ್ತೆ
ಬೆಂಗಳೂರಿನಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಕುಟುಂಬವೊಂದರಲ್ಲಿ ನಡೆದ ದುರಂತ ಘಟನೆಯನ್ನು ಈ ವರದಿ ವಿವರಿಸುತ್ತದೆ. ಕೆಲಸಕ್ಕೆಂದು ಹೋದ ಮಹಿಳೆ ವಾಪಸ್ ಬಾರದೇ ಇದ್ದಾಗ, ಆಕೆಯ ಡೆಡ್ ಬಾಡಿ ಪತ್ತೆಯಾಗುತ್ತದೆ. ಮತ್ತೊಂದು ಪ್ರಕರಣದಲ್ಲಿ, ಗಂಡ ಹೆಂಡತಿಯ ಜಗಳ ದುರಂತ ಅಂತ್ಯ ಕಾಣುತ್ತದೆ.
ಅದು ಬಾಂಗ್ಲಾದೇಶದ ಕುಟುಂಬ. ಅದೇಗೆ ಯಾವಾಗ ಭಾರತಕ್ಕೆ ಬಂತೋ ಗೊತ್ತಿಲ್ಲ ಆದ್ರೆ ಬೆಂಗಳೂರಿನಲ್ಲಿ ಒಂದು ಪುಟ್ಟ ಗೂಡು ಮಾಡಿಕೊಂಡು ನೆಲಸಿತ್ತು. ಗಂಡ ಬಿಬಿಎಂಪಿಯಲ್ಲಿ ಡಿ ದರ್ಜೆಯ ನೌಕರನ್ನಾಗಿದ್ರೆ. ಹೆಂಡತಿ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇನ್ನೂ ಅವರಿಗೆ ಇಬ್ಬರು ಮಕ್ಕಳು. ಕಡುಬಡತನವಿದ್ದರೂ ನೆಮ್ಮದಿಯ ಜೀವನ ಅವರದ್ದಾಗಿತ್ತು. ಆದ್ರೆ ಆವತ್ತೊಂದು ದಿನ ಹೆಂಡತಿ ಕೆಲಸಕ್ಕೆ ಅಂತ ಹೋದವಳು ವಾಪಸ್ ಬರೋದೇ ಇಲ್ಲ. ಗಂಡ ಹುಡುಕಬಾರದ ಜಾಗವನ್ನೆಲ್ಲಾ ಹುಡುಕಿ ಪೊಲೀಸ್ ಕಂಪ್ಲೆಂಟ್ ಅನ್ನೂ ಕೊಟ್ಟ. ಆದ್ರೆ ಕೇಸ್ ದಾಖಲಿಸಕೊಂಡು ತನಿಖೆ ನಡೆಸಿದ ಪೊಲೀರಿಗೆ ಆ ಮಹಿಳೆಯ ಡೆಡ್ ಬಾಡಿ ಸಿಗುತ್ತೆ. ಹಾಗಾದ್ರೆ ಆ ಹೆಣ್ಣು ಮಗಳಿಗೆ ಏನಾಯ್ತು? ಬೆಂಗಳೂರನ್ನೇ ಬೆಚ್ಚಿ ಬಿಳಿಸಿದ ಬಾಂಗ್ಲಾ ಮಹಿಳೆಯ ಮರ್ಡರ್ ಕಹನಿಯೇ ಇವತ್ತಿನ ಎಫ್.ಐ.ಆರ್.
ಅವರಿಬ್ಬರು ಪ್ರೀತಿಸಿ ಮದುವೆಯಾದವರು. ಒಬ್ಬ ಮಗ ಕೂಡ ಇದ್ದ. ಗಂಡ ಕ್ಯಾಬ್ ಡ್ರೈವರ್ ಆದ್ರೆ, ಹೆಂಡತಿ ಮಗನನ್ನ ನೋಡಿಕೊಂಡು ಮನೆಯಲ್ಲೇ ಇದ್ದಳು. ಆದ್ರೆ ಎರಡು ವರ್ಷದಿಂದೇಚೆಗೆ ಗಂಡ ಹೆಂಡಿರ ನಡುವೆ ವೈಮನಸ್ಸು ಶುರುವಾಗಿದೆ. ಸಣ್ಣ ಪುಟ್ಟ ವಿಷಯಗಳಿಗೂ ಜಗಳ. ನೋಡೋವರೆಗೂ ನೋಡಿದ ಹೆಂಡತಿ ಸೀದಾ ತವರು ಮನೆಗೆ ಹೋಗಿ ಕೂತುಬಿಡ್ತಾಳೆ. ಗಂಡ ಕೂಡ ತಾಯಿ ಮನೆಯಲ್ಲೇ ಇರ್ತಾನೆ. ಆದ್ರೆ ಅವತ್ತು ಏನಾಯ್ತೋ ಏನೋ ಹೆಂಡತಿಯನ್ನ ಕರೆದುಕೊಂಡು ಬರಲೇ ಬೇಕು ಅಂತ ಆಕೆಯ ಮನೆಗೆ ಹೋಗಿದ್ದಾನೆ. ಆದ್ರೆ ಹೆಂಡತಿ ಮಾತ್ರ ಆತ ಎಷ್ಟೇ ಕರೆದರು ಬರೋದಿಲ್ಲ. ನೋಡೋವರೆಗೂ ನೋಡಿದ ಗಂಡ ಸೀದ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡುಬಿಡ್ತಾನೆ.
ಗಂಡ ಹೆಂಡಿರ ಜಗಳ ಉಂಡು ಮಲಗೋವರೆಗೂ ಅಂತಾರೆ. ಒಂದು ವೇಳೆ ಉಂಡು ಮಲಗಿದ ಮೇಲೆ ಮುಂದುವರೆದರೆ ಏನಾಗುತ್ತೆ ಅನ್ನೋದಕ್ಕೆ ಈ ಮಂಜುನಾಥನ ಕಥೆಯೇ ಸಾಕ್ಷಿ.