Asianet Suvarna News Asianet Suvarna News

ಬಳ್ಳಾರಿ ಜಿಲ್ಲೆಯ ವಿಭಜನೆಗೆ ಹೆಚ್ಚಿದ ವಿರೋಧ

ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ| ಯಡಿಯೂರಪ್ಪ ಹಾಗೂ ಸಚಿವ ಆನಂದ ಸಿಂಗ್‌ ವಿರುದ್ಧ ಹರಿಹಾಯ್ದ ಕನ್ನಡ ಪರ ಸಂಘಟನೆಗಳು| 

Nov 26, 2020, 12:19 PM IST

ಬಳ್ಳಾರಿ(ನ.26): ಅಖಂಡ ಬಳ್ಳಾರಿ ಜಿಲ್ಲೆಯ ಉಳಿವಿಗಾಗಿ ಇಂದು(ಗುರುವಾರ) ಬಳ್ಳಾರಿ ಬಂದ್‌ ನಡೆಸಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ವಿಭಜನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ವಿಜಯನಗರ ಜಿಲ್ಲಾ ರಚನೆಯನ್ನ ವಿರೋಧಿಸಿದ ಸುಮಾರು 15 ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಕ್ಯಾಬಿನೆಟ್‌ ಸಸ್ಪೆನ್ಸ್‌: ಶೀಘ್ರವೇ ಬಿಎಸ್‌ವೈ ಸಂಪುಟಕ್ಕೆ ಮೇಜರ್‌ ಸರ್ಜರಿ..?

ಇಂದು ಬೆಳಿಗ್ಗೆಯಿಂದಲೇ ನಗರದಲ್ಲಿ ಕನ್ನಡ ಪರ ಸಂಘಟನೆಗಳು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ವಿರುದ್ಧ ಹರಿಹಾಯ್ದಿವೆ. ಕತ್ತೆ ಮೇಲೆ ಏರಿ ಪ್ರತಿಭಟನೆ ನಡೆಸುತ್ತಿದ್ದಾರೆ.