ಬಿಗ್‌3 ಇಂಪ್ಯಾಕ್ಟ್‌: ಗುಳೇದಗುಡ್ಡದ ನಿವೃತ್ತ ಶಿಕ್ಷಕರ ಸಂಕಷ್ಟಕ್ಕೆ ಮುಕ್ತಿ, ಜನ ಫುಲ್‌ ಖುಷ್‌..!

ಸರ್ವಪಲ್ಲಿ ರಾಧಾಕೃಷ್ಣ ಕಾಲೋನಿಯಲ್ಲಿ ಬೀದಿದೀಪ ಅಳವಡಿಸಿದ ಪುರಸಭೆ| ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣ| ಶಿಕ್ಷಕರ ಬೆನ್ನಿಗೆ ನಿಂತಿತ್ತು ಬಿಗ್‌3| ಏಷಿಯಾನೆಟ್‌ ಸುವರ್ಣ ನ್ಯೂಸ್‌ ವರದಿ ಎಚ್ಚೆತ್ತ ಅಧಿಕಾರಿಗಳು| 

First Published Dec 7, 2020, 12:35 PM IST | Last Updated Dec 7, 2020, 12:35 PM IST

ಬಾಗಲಕೋಟೆ(ಡಿ.07): ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಸರ್ವಪಲ್ಲಿ ರಾಧಾಕೃಷ್ಣ ಕಾಲೋನಿಯಲ್ಲಿ ಯಾವುದೇ ಮೂಲಭೂತ ಸೌಕರದ್ಯಗಳಿಲ್ಲದೆ ನಿವೃತ್ತ ಶಿಕ್ಷಕರು ಪರದಾಟುತ್ತಿದ್ದ ಬಗ್ಗೆ ಏಷಿಯಾನೆಟ್‌ ಸುವರ್ಣ ನ್ಯೂಸ್‌ ವರದಿ ಮಾಡಿತ್ತು. ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಕಾಲೋನಿಗೆ ಆಗಮಿಸಿ ಸೂಕ್ತ ಮೂಲಭೂತ ಸೌಕರ್ಯಗಳನ್ನ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದರು.

ಬಿಗ್‌3 ಇಂಪ್ಯಾಕ್ಟ್‌: ಗುಳೇದಗುಡ್ಡ ಶಿಕ್ಷಕರ ಸಂಕಷ್ಟಕ್ಕೆ ಕೊನೆಗೂ ಸಿಕ್ತು ಮುಕ್ತಿ..!

ಇದೀಗ ಈ ಕಾಲೋನಿಯಲ್ಲಿ ಬೀದಿದೀಪಗಳನ್ನ ಸ್ಥಳೀಯ ಪುರಸಭೆ ಅಳವಡಿಸಿದೆ. ಹೀಗಾಗಿ ಸ್ಥಳೀಯರು ಸಂತಸದಿಂದಿದ್ದು, ಏಷಿಯಾನೆಟ್‌ ಸುವರ್ಣ ನ್ಯೂಸ್‌ಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಶಿಕ್ಷಕರ ಬೆನ್ನಿಗೆ ನಿಂತಿತ್ತು ಬಿಗ್‌3.