ಬಾಗಲಕೋಟೆ(ಡಿ.03): ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ನಿವೃತ್ತ ಶಿಕ್ಷಕರು ಪರದಾಟುವಂತ ಪರಿಸ್ಥಿತಿ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ.  ಸರ್ವಪಲ್ಲಿ ರಾಧಾಕೃಷ್ಣ ಕಾಲೋನಿಯಲ್ಲಿ ಹೆಚ್ಚಾಗಿ ನಿವೃತ್ತ ಶಿಕ್ಷಕರೇ ವಾಸಿಸುತ್ತಿದ್ದಾರೆ. ರಾತ್ರಿಯಾದರೆ ಸಾಕು ಜನರು ಮನೆ ಬಿಟ್ಟು ಹೊರಗಡೆ ಬಾರದಂತ ಪರಿಸ್ಥಿತಿ ಬಂದೊದಗಿದೆ. ಏಕೆಂದರೆ ಈ ಕಾಲೋನಿಯಲ್ಲಿ ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲ. ಇದೂ ಅಲ್ಲದೆ ಇಲ್ಲಿ ಸರಿಯಾದ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. 

"

ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಕ್ಷೇತ್ರವಾಗಿದೆ. ಇಷ್ಟಾಗಿಯೂ ಇಲ್ಲಿನ ಜನರ ಪಾಡುನ ಹೇಳತೀರದಾಗಿದೆ. ಹೀಗಾಗಿ ಇಲ್ಲಿನ ನಿವೃತ್ತ ಶಿಕ್ಷಕರ ಬೆನ್ನಿಗೆ ಏಷಿಯಾನೆಟ್‌ ಸುವರ್ಣ ನ್ಯೂಸ್‌ ನಿಂತಿದೆ.  ಇಲ್ಲಿನ ಸಮಸ್ಯೆಗಳ ಕುರಿತು ಬಿಗ್‌3 ಕಾರ್ಯಕ್ರಮದಲ್ಲಿ ವರದಿ ಕೂಡ ಪ್ರಸಾರವಾಗಿತ್ತು. 

"

ವರದಿ ಪ್ರಸಾರವಾದ ಕೂಡಲೇ ಸಿದ್ದರಾಮಯ್ಯ ಅವರು ನಿವೃತ್ತ ಶಿಕ್ಷರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಹೌದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿದ್ದರಾಮಯ್ಯ ಬಿಸಿ ಮುಟ್ಟಿಸಿದ್ದಾರೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ನಿವೃತ್ತ ಶಿಕ್ಷಕರ ಸಮಸ್ಯೆಗಳನ್ನ ಆಲಿಸಿದ್ದಾರೆ. ಸೌಲಭ್ಯಗಳನ್ನ ಒದಗಿಸಿಕೊಡುವ ಭರವಸೆ ಕೂಡ ನೀಡಿದ್ದಾರೆ.