ಬಾಗಲಕೋಟೆ ಒತ್ತುವರಿ ತೆರವಿಗೆ ನಲುಗಿದ ಮಲಪ್ರಭೆ, ಕಣ್ತೆರೆಯಬೇಕಿದೆ ಸರ್ಕಾರ
ಉತ್ತರ ಕರ್ನಾಟಕದ ಜೀವನದಿಗಳಲ್ಲೊಂದಾಗಿರೋ ಮಲಪ್ರಭಾ ನದಿಗೆ ಪ್ರತಿವರ್ಷ ಪ್ರವಾಹ ಬರುತ್ತಿರೋ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಮಲಪ್ರಭಾ ನದಿಯ ಇಕ್ಕೆಲಗಳ ಒತ್ತುವರಿ ತೆರವಿಗೆ ಕೂಗು ಕೇಳಿ ಬರ್ತಿದೆ.
ಬಾಗಲಕೋಟೆ (ಮೇ. 23): ಉತ್ತರ ಕರ್ನಾಟಕದ ಜೀವನದಿಗಳಲ್ಲೊಂದಾಗಿರೋ ಮಲಪ್ರಭಾ ನದಿಗೆ ಪ್ರತಿವರ್ಷ ಪ್ರವಾಹ ಬರುತ್ತಿರೋ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಮಲಪ್ರಭಾ ನದಿಯ ಇಕ್ಕೆಲಗಳ ಒತ್ತುವರಿ ತೆರವಿಗೆ ಕೂಗು ಕೇಳಿ ಬರ್ತಿದೆ. ಈ ಮಧ್ಯೆ ಪ್ರತಿವರ್ಷ ಪ್ರವಾಹ ಭೀತಿ ಒಂದೆಡೆಯಾದ್ರೆ ಮತ್ತೊಂದೆಡೆ ಕಳಸಾ ಬಂಡೂರಿ ತಿರುವು ಯೋಜನೆ ಅನುಷ್ಠಾನ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಎಚ್ಚರಿಕೆ ಹೆಜ್ಜೆ ಇಡಬೇಕಿದೆ.
Bagalkot:ಇಲಕಲ್ ಸೀರೆಯಲ್ಲಿ ಅರಳಿದ ಅಯೋಧ್ಯೆಯ ರಾಮ ಮಂದಿರ
2009 ರಿಂದ ಹಿಡಿದು ಆಗಾಗ ಈಚೆಗೆ ಸತತವಾಗಿ ಬಹುತೇಕ ಪ್ರವಾಹದ ಎಫೆಕ್ಟ್ ಜೋರಾಗ್ತಿರೋದ್ರಿಂದ ಇದೀಗ ರಾಜ್ಯ ಸಕಾ೯ರಕ್ಕೂ ತಲೆನೋವಾಗಿ ಪರಿಣಮಿಸಿದೆ. ಹೀಗೆ ಪದೇ ಪದೇ ಪ್ರವಾಹಕ್ಕೆ ಕಾರಣವೇನು ಎಂದು ನೋಡಿದಾಗ ನದಿಯಲ್ಲಿ ಹೂಳಿರುವುದು ಮತ್ತು ನದಿಯ ಇಕ್ಕೆಲಗಳಲ್ಲಿ ಒತ್ತುವರಿ ಮಾಡಿದ್ದೇ ಮೂಲ ಕಾರಣ ಅಂತ ಗೊತ್ತಾಗಿದ್ದು, ಈ ಹಿನ್ನೆಲೆಯಲ್ಲಿ ಸಕಾ೯ರ ನದಿಯ ಅಕ್ಕಪಕ್ಕದ ಅತಿಕ್ರಮಣ ತೆರವು ಕಾಯ೯ ನಡೆಸಲು ಮುಂದಾಗಬೇಕಿದೆ. ಆದ್ರೆ ಆ ಕೆಲಸ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಒತ್ತುವರಿಗೆ ತೆರವಿಗೆ ಮುಂದಾಗಬೇಕು ಇಲ್ಲವಾದಲ್ಲಿ ಮತ್ತೇ ಪ್ರವಾಹ ಬಂದಲ್ಲಿ ಇನ್ನಷ್ಟು ಬೆಲೆ ತೆರಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
Bagalkote: ಈ ಊರಲ್ಲಿ ಇನ್ನು 6 ತಿಂಗಳು ಗಂಡು ಮಕ್ಕಳ ಮದುವೆ ಮಾಡಂಗಿಲ್ಲ ಇದು ತುಳಸಿಗೇರಿ ಹನುಮನ ಎಫೆಕ್ಟ್!
ಇನ್ನು ಬೆಳಗಾವಿ ಜಿಲ್ಲೆಯ ಖಾನಾಪೂರ ದ ಕನಕುಂಬಿಯಲ್ಲಿ ಹುಟ್ಟುವ ಮಲಪ್ರಭಾ ನದಿಯು ಮುಂದೆ ಮುನವಳ್ಳಿ , ಗದಗ ಜಿಲ್ಲೆಯ ಕೊಣ್ಣೂರ ಭಾಗವನ್ನ ದಾಟಿ ನಂತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿ , ಕಮತಗಿ ಮಾರ್ಗವಾಗಿ ಕೂಡಲಸಂಗಮ ಸೇರುತ್ತದೆ. ಹೀಗಾಗಿ ಮಲಪ್ರಭಾ ನದಿಯು ಬಾಗಲಕೋಟೆ, ಬೆಳಗಾವಿ, ಗದಗ ಸೇರಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಂದಾಜು 360 ಕಿಮೀಗೂ ಅಧಿಕ ಉದ್ದವನ್ನು ಹೊಂದಿದ್ದು, ಈ ನದಿ ಪಾತ್ರದಲ್ಲಿ ಸಾವಿರಾರು ಕಿಮೀ ಒತ್ತುವರಿ ಯಾಗಿದೆ. ಕಳೆದ 40 ವರ್ಷಗಳ ಹಿಂದೆ 1980ರಲ್ಲಿಯೇ ರಾಮದುರ್ಗದ ನಿವಾಸಿ ಮಾರುತಿ ಚಂದರಗಿ ನಾಗರಿಕ ವೇದಿಕೆಯನ್ನು ಕಟ್ಟಿಕೊಂಡು ಮಲಪ್ರಭೆ ಸ್ವಚ್ಚತೆ ಮತ್ತು ಒತ್ತುವರಿ ತೆರವಿಗೆ ಇನ್ನಿಲ್ಲದ ಹೋರಾಟ ಮಾಡುತ್ತಲೇ ಬಂದಿದ್ರು. ಬಳಿಕ ಸೂರೇಬಾನ ಗ್ರಾಮದ ಪೂರ್ಣಿಮಾ ಗೌರೋಜಿ ನ್ಯಾಯಾಲಯದ ಮೆಟ್ಟಿಲು ಏರಿದ್ರು. ಹೀಗೆ ಸತತವಾಗಿ ಹೋರಾಟದ ಮಧ್ಯೆ ಇಂದು ನಿರಂತರ ಮಲಪ್ರಭಾ ನದಿಯ ಪ್ರವಾಹ ಸರ್ಕಾರವನ್ನು ಕಂಗೆಡುವಂತೆ ಮಾಡಿದ್ದು, ಆದ್ದರಿಂದ ಸರ್ಕಾರವೇ ಇದೀಗ ನದಿಯ ಹೂಳು ತೆಗೆಯುವುದು ಸೇರಿದಂತೆ ಒತ್ತುವರಿ ತೆರವು ನಡೆಸಲು ಮುಂದಾಗಬೇಕಿದೆ ಅಂತಾರೆ ಸಾರ್ವಜನಿಕರು.