Asianet Suvarna News Asianet Suvarna News

ಮೈಸೂರಿನಲ್ಲಿ ಎತ್ತ ನೋಡಿದ್ರು ಗುಂಡಿಗಳದ್ದೆ ದರ್ಬಾರ್, ಪರದಾಡುತ್ತಿದ್ದಾರೆ ವಾಹನ ಸವಾರರು..!

ತಿಂಗಳ ಹಿಂದೆ ದಸರಾ ಸಂದರ್ಭದಲ್ಲಿ ಮೈಸೂರಿನ ರಸ್ತೆಗಳಿಗೆಲ್ಲ ಡಾಂಬರು ಹಾಕಿ ಗುಂಡಿ ಮುಚ್ಚಲಾಗಿತ್ತು. ಆದ್ರೆ ಇದೀಗ ಮತ್ತೆ ಈ ರಸ್ತೆಗಳೆಲ್ಲ ಗುಂಡಿಬಿದ್ದಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.‌

ಬೆಂಗಳೂರು (ನ. 12): ತಿಂಗಳ ಹಿಂದೆ ದಸರಾ ಸಂದರ್ಭದಲ್ಲಿ ಮೈಸೂರಿನ (Mysuru)  ರಸ್ತೆಗಳಿಗೆಲ್ಲ ಡಾಂಬರು ಹಾಕಿ ಗುಂಡಿ ಮುಚ್ಚಲಾಗಿತ್ತು. ಆದ್ರೆ ಇದೀಗ ಮತ್ತೆ ಈ ರಸ್ತೆಗಳೆಲ್ಲ ಗುಂಡಿಬಿದ್ದಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.‌ ಅದರಲ್ಲೂ ಮಳೆ ಬಂದರೆ ರಸ್ತೆ ಗುಂಡಿಗಳು ಕಾಣಿಸದೆ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲೆ ಬಿದ್ದು ಕೈ ಕಾಲು ಮುರಿದುಕೊಳ್ಳುತ್ತಿದ್ದಾರೆ.‌ ಈ ಬಗ್ಗೆ ಪಾಲಿಕೆ ಸದಸ್ಯರನ್ನ ಕೇಳಿದ್ರೆ ಅಸಹಾಯಕತೆ ತೋರುತ್ತಾರೆ.‌ 

Bagalkot: ಕುಮಾರರೇಶ್ವರ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸೆ

ಇದು ಮೈಸೂರು ನಗರದ ಅವಸ್ಥೆಯಾಗಿದ್ರೆ ರಾಷ್ಟ್ರೀಯ ಹೆದ್ದಾರಿ ಕೂಡ ಇದರ ಹೊರತಾಗಿಲ್ಲ.‌ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಕೂಡ ಗುಂಡಿ ಬಿದ್ದಿದೆ.‌ ಈ ರಸ್ತೆಯಲ್ಲಿ‌ ದೊಡ್ಡ ದೊಡ್ಡಗುಂಡಿಗಳಾಗಿದ್ದು ಈ ಬಗ್ಗೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಆದ್ರೆ ಈ ರಸ್ತೆಯಲ್ಲಿ ಸಂಚರಿಸಬೇಕಾದ್ರೆ ಟೋಲ್ ಕಟ್ಟಿಸಿಕೊಳ್ಳುವ ಅಧಿಕಾರಿಗಳು ಗುಂಡಿ ಮುಚ್ವುವ ಕೆಲಸಕ್ಕೆ ಮುಂದಾಗಿಲ್ಲ.‌ ಇಲ್ಲಿನ ಶಾಸಕರು ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.