Bagalkot: ಕುಮಾರೇಶ್ವರ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸೆ
- ಬಾಗಲಕೋಟೆಯಲ್ಲಿ ಶುರುವಾಯ್ತು ಉಚಿತ ತೆರೆದ ಹೃದಯ ಶಸ್ತ್ರಚಿಕಿತ್ಸೆ ಸೌಲಭ್ಯ
- ಬಡರೋಗಿಗಳಿಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಹೃದಯ ಶಸ್ತ್ರ ಚಿಕಿತ್ಸೆ
- ಕುಮಾರೇಶ್ವರ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತ ಹೃದಯ ಶಸ್ತ್ರ ಚಿಕಿತ್ಸೆ
ಬೆಂಗಳೂರು (ನ. 12): ಸಾಮಾನ್ಯವಾಗಿ ಉತ್ತರ ಕರ್ನಾಟಕದ (North Karnataka) ಬಹುತೇಕ ಜಿಲ್ಲೆಗಳಲ್ಲಿ ಹೃದಯ ಸಂಬಂಧಿತ ರೋಗಿಗಳಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ( Open Heart Surgery ) ಮಾಡಿಸಬೇಕೆಂದರೆ ದೂರದ ಊರುಗಳಿಗೆ ಹೋಗೋದು, ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿತ್ತು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಹೊತ್ತು ಸಾಗಿದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್, ಮೆಚ್ಚುಗೆಯ ಮಹಾಪೂರ!
ಅದೆಷ್ಟೋ ಬಡರೋಗಿಗಳು ಚಿಕಿತ್ಸೆ ಕೊಡಿಸಲು ಆಗದೆ ಅಸಹಾಯಕರಾಗಿದ್ದರು. ಆದ್ರೆ ಇದೀಗ ಬಾಗಲಕೋಟೆಯಲ್ಲಿ ಸರ್ಕಾರದ ಯೋಜನೆಯಡಿ ಕುಮಾರೇಶ್ವರ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಸೇವೆ ಆರಂಭವಾಗಿದ್ದು, ಬಡರೋಗಿಗಳಿಗೆ ವರದಾನವಾಗಿದೆ. ಈ ಸೌಲಭ್ಯವನ್ನ ಬಡ ರೋಗಿಗಳು ಪಡೆದುಕೊಳ್ಳುವಂತೆ ಸಂಸ್ಥೆಯ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.