ಶಿವಾನಂದ ಪಾಟೀಲ್ ರೈತರಿಗೆ ಅಪಮಾನ ಮಾಡಿದ್ದು, ಕ್ಷಮೆ ಕೇಳಬೇಕು: ಬಿ.ವೈ. ವಿಜಯೇಂದ್ರ

ಪಾಟೀಲ್ ಹೇಳಿಕೆ ಖಂಡಿಸಿದ ಬಿ.ವೈ. ವಿಜಯೇಂದ್ರ
ಕೂಡಲೇ ಶಿವಾನಂದ ಪಾಟೀಲ್ ರಾಜೀನಾಮೆ ಪಡೆಯಿರಿ
ಸಿದ್ದರಾಮಯ್ಯ ಸಚಿವರ ರಾಜೀನಾಮೆ ಪಡೆಯಬೇಕು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ

Share this Video
  • FB
  • Linkdin
  • Whatsapp

ರೈತರಿಗೆ ಸಚಿವ ಶಿವಾನಂದ ಪಾಟೀಲ್(Farmers Minister Shivananda Patil) ಅಪಮಾನ ಮಾಡಿದ್ದಾರೆ. ಕೂಡಲೇ ಅವರ ರಾಜೀನಾಮೆ ಪಡೆಯಿರಿ. ಸಚಿವರನ್ನು ವಜಾ ಮಾಡಿದ್ರೆ, ದೇಶ ಮುಳುಗಿ ಹೋಗಲ್ಲ. ಈಗ ಮತ್ತೆ ಅದೇ ದುರಹಂಕಾರದ ಮಾತು ಆಡಿದ್ದಾರೆ‌ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BJP State President B.Y. Vijayendra) ಕಿಡಿಕಾರಿದ್ದಾರೆ. ಶಿವಾನಂದ ಪಾಟೀಲರನ್ನು ಕರೆದು ಬುದ್ಧಿ ಹೇಳಿ, ಬುದ್ಧಿ ಕಲಿಯದಿದ್ದರೆ ಸಂಪುಟದಿಂದ ಕೈಬಿಡಬೇಕು. ಮೊನ್ನೆ ಸಚಿವ ಜಮೀರ್ ಅಹಮ್ಮದ್ ಕೂಡ ಫ್ಯಾಷನ್ ಶೋ ಮಾಡಿದ್ದಾರೆ ಎಂದು ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ರು. ದೇಶಕ್ಕೆ ಅನ್ನ ಕೊಡುವ ರೈತರ(Farmers) ಬಗ್ಗೆ ಈ ರೀತಿ ಧೋರಣೆ ತೋರುವುದು ಸರಿಯಲ್ಲ. ಸರ್ಕಾರದಲ್ಲಿರುವ ಮಂತ್ರಿಗಳ ನಡವಳಿಕೆ ಸರಿಯಾಗಿಲ್ಲ. ಪರಿಹಾರ ಕೊಡುವ ಯೋಗ್ಯತೆಯೂ ಸರ್ಕಾರಕ್ಕೆ ಇಲ್ಲ. ಎಲ್ಲ ಸಚಿವರು ರೈತರಿಗೆ ಅವಮಾನ ಮಾಡ್ತಾರೆ ಎಂದು ಹೇಳಿದರು. ಶಿವಾನಂದ ಪಾಟೀಲ್ ರೈತರ ಕ್ಷಮೆ ಕೇಳಬೇಕು. ಸರ್ಕಾರ ಹಾಗೂ ಸಚಿವರ ನಡವಳಿಕೆ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಬರಗಾಲ ಬರಲಿ ಅಂತಾ ರೈತರು ಕಾಯ್ತಿದ್ದಾರೆ: ಶಿವಾನಂದ ಪಾಟೀಲ್ ವಿವಾದಾತ್ಮಕ ಹೇಳಿಕೆ

Related Video