Asianet Suvarna News Asianet Suvarna News

ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ 15 ವರ್ಷ ಸಂಭ್ರಮ,ತೆರೆ ಮರೆ ಸಿಬ್ಬಂದಿಗೆ ಬೆನ್ನು ತಟ್ಟಿದ ತಂಡ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ 15 ವರ್ಷ ಸಂಭ್ರಮ ಹಿನ್ನೆಲೆಯಲ್ಲಿ  ಕಚೇರಿಯಲ್ಲಿ ಸಂಭ್ರಮ ಮನೆಮಾಡಿದ್ದು ಕೇಕ್‌ ಕತ್ತರಿಸಿ  ವಾರ್ಷಿಕೋತ್ಸವ ಆಚರಿಸಿ ಸುವರ್ಣ ನ್ಯೂಸ್‌ ತಂಡ. ಸಿಬ್ಬಂದಿಗೆ ಬೆನ್ನು ತಟ್ಟಿ ಪ್ರಶಸ್ತಿ ನೀಡುವ ಮೂಲಕ  ಗೌರವಿಸಿದೆ. 
 

2008, ಮಾರ್ಚ್‌ 31. ಕನ್ನಡ ವಿದ್ಯುನ್ಮಾನ ಲೋಕದಲ್ಲಿ ಭರವಸೆಯ ಪತ್ರಿಕೋದ್ಯಮ ಜನ್ಮತಾಳಿದ ದಿನ. ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಕನ್ನಡ ಟೆಲಿವಿಷನ್‌ ಲೋಕದ ಭಾಷ್ಯವನ್ನೇ ಬದಲಿಸಿದ ವಾಹಿನಿ. ಟೀವಿ ಮಾಧ್ಯಮಕ್ಕೆ ಅಂಬೆಗಾಲಿಟ್ಟು ಬಂದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಈ 15 ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ.  15 ವರ್ಷ ಸಂಭ್ರಮ ಹಿನ್ನೆಲೆಯಲ್ಲಿ  ಕಚೇರಿಯಲ್ಲಿ ಸಂಭ್ರಮ ಮನೆಮಾಡಿದ್ದು ಕೇಕ್‌ ಕತ್ತರಿಸಿ  ವಾರ್ಷಿಕೋತ್ಸವ ಆಚರಿಸಿದ ಸುವರ್ಣ ನ್ಯೂಸ್‌ ತಂಡ ಸಿಬ್ಬಂದಿಗೆ ಬೆನ್ನು ತಟ್ಟಿ ಪ್ರಶಸ್ತಿ ನೀಡುವ ಕಾರ್ಯ ಮಾಡಿದೆ.  ಹಾಗೇ ಪ್ರಶಾಂತ್‌ ನಾತು, ಸತ್ಯಬೋಧ ಜೋಶಿಗೆ ಸುವರ್ಣ ಗೌರವ ನೀಡಿ ಸನ್ಮಾನಿಸಲಾಯಿತು. ಇನ್ನು ನಿಷ್ಪಕ್ಷಪಾತ ವರದಿ, ದಿಟ್ಟವರದಿಗಾರಿಕೆಯಿಂದ ಸುವರ್ಣ ನ್ಯೂಸ್‌ ವಾಹಿನಿ ಟೀವಿ ಮಾಧ್ಯಮದಲ್ಲಿ ಗಟ್ಟಿಯಾಗಿ ಬೇರೂರಿದೆ.ಕಳೆದ 15 ವರ್ಷದಲ್ಲಿ ಸುವರ್ಣ ನ್ಯೂಸ್‌ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದೆ. ಮಾಧ್ಯಮ ಲೋಕದಲ್ಲಿ ಕ್ರಾಂತಿಯನ್ನೇ ಮಾಡಿದೆ. ಹೊಸತನಗಳ ಹರಿಕಾರ ಎನಿಸಿಕೊಂಡಿದೆ. ದಿಟ್ಟತನಕ್ಕೆ ಎದೆಯೊಡ್ಡಿ, ತೊಡೆತಟ್ಟಿದೆ.