Asianet Suvarna News Asianet Suvarna News

ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಭರ್ತಿ 15 ವರ್ಷ,ಬದಲಾವಣೆಯ ಯುಗದಲ್ಲಿ ಸುವರ್ಣ ನ್ಯೂಸ್ ಸಾಧನೆ..!

 ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ 15 ವರ್ಷ ಸಂಭ್ರಮ ಹಿನ್ನೆಲೆಯಲ್ಲಿ  ಕಚೇರಿಯಲ್ಲಿ ಸಂಭ್ರಮ ಮನೆಮಾಡಿದ್ದು ಕೇಕ್‌ ಕತ್ತರಿಸಿ  ವಾರ್ಷಿಕೋತ್ಸವ ಆಚರಿಸಿ ಸುವರ್ಣ ನ್ಯೂಸ್‌ ತಂಡ ಸಿಬ್ಬಂದಿಗೆ ಬೆನ್ನು ತಟ್ಟಿ ಪ್ರಶಸ್ತಿ ನೀಡುವ ಕಾರ್ಯ ಮಾಡಿದೆ.  

 ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಭರ್ತಿ 15 ವರ್ಷ. ಏಷ್ಯಾನೆಟ್ ಸುವರ್ಣ  ನ್ಯೂಸ್ ಕನ್ನಡದ ಮತ್ತೊಂದು ಸುದ್ದಿ ವಾಹಿನಿ ಅಲ್ಲದೆ ಕನ್ನಡಿಗರು, ಕನ್ನಡದ ಜನರು ನಂಬಿಕೆ ಇಟ್ಟಿರುವ, ಭರವಸೆ ಇಟ್ಟಿರುವ ಮಾಧ್ಯಮ ಸಂಸ್ಥೆ. 31 ಮಾರ್ಚ್ 2008ರಿಂದ  ಇಂದಿನವರೆಗೆ  ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡಿಗರ ಜೊತೆ ತಾನೂ ಹೆಜ್ಜೆ ಹಾಕಿದೆ. ಇನ್ನು ಸಂಭ್ರಮದ ಸಂಕೇತವಾಗಿ ಶುಕ್ರವಾರ,  ಏಷ್ಯಾನೆಟ್ ಸುವರ್ಣ ನ್ಯೂಸ್ ಕಚೇರಿಯಲ್ಲಿ ಹಬ್ಬದ ವಾತಾವರಣವೇ ಇದ್ದು, ಎಲ್ಲೆಡೆ ಸಂಭ್ರಮ ಸಂತಸ.. ಇಡೀ ಏಷ್ಯಾನೆಟ್ ಸುವರ್ಣ ನ್ಯೂಸ್ ಕುಟುಂಬವೇ ಒಟ್ಟಿಗೆ ಕೂತು ಊಟ ಮಾಡಿತ್ತು.ಹಾಗೇ  ಅಚ್ಚರಿಯ ಕಾರ್ಯಕ್ರಮವೂ ನಡೆದಿದ್ದು,  ಕಾರ್ಯಕ್ರಮಕ್ಕೆ ಮೆರುಗು ನೀಡಲು, ವೇದಿಕೆಯ ಮೇಲೆ ಪ್ರಧಾನ ಸಂಪಾಕರಾದ ರವಿ ಹೆಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಮುಖ್ಯಸ್ಥರಾದ ಅಜಿತ್ ಹನಮಕ್ಕನವರ್, ಬ್ಯುಸಿನೆಸ್ ಹೆಡ್ ಅಪ್ಪಚ್ಚು ಎನ್ ಕೆ ಅವರು ಭಾಗವಹಿಸಿದ್ರು. ಇನ್ನು  ನೇರ.. ದಿಟ್ಟ.. ನಿರಂತರ ಸುದ್ದಿವಾಹಿನಿಯಲ್ಲಿ ಹೇಗಿತ್ತು ಗೊತ್ತಾ ಸಂಭ್ರಮ.. ಸಡಗರ..? ನೆನಪುಗಳು.. ಸಾಧನೆಗಳು.. ಒಂದೂವರೆ ದಶಕದಿಂದ ನಡೆದುಬಂದ ಹಾದಿಗಳು ಏನು ಈ ವಿಡಿಯೋ ನೋಡಿ