ಪೊಲೀಸರ ರಿಮ್ಯಾಂಡ್ ಅರ್ಜಿಯಲ್ಲಿ ಏನಿದೆ..? ದಾಸನಿಗೆ ಸದ್ಯಕಿಲ್ಲವಾ ಬಿಡುಗಡೆ ಭಾಗ್ಯ..?

ತನ್ನದೇ ರೆಕಾರ್ಡ್ ಬ್ರೇಕ್ ಮಾಡಿಕೊಂಡ ದಾಸ..!
ನಟ ದರ್ಶನ್‌ಗೆ ಮನೆ ಊಟವೂ ಸಿಗೋದಿಲ್ವಾ..?
ಡಿ ಗ್ಯಾಂಗ್‌ನ ಬಾಸ್‌ಗೆ ಮತ್ತೇ ಜೈಲು ವಾಸ ಫಿಕ್ಸ್..!
 

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿಯನ್ನ ಕೊಲೆ (Renukaswamy murder case)ಮಾಡಿ ಜೈಲು ಸೇರಿರುವ ಡಿಗ್ಯಾಂಗ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಇವತ್ತು ನ್ಯಾಯಾಂಗ ಬಂಧನ(judicial custody) ಮುಕ್ತಾಯವಾದ ಹಿನ್ನೆಲೆ ಮತ್ತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಆದ್ರೆ ಕೋರ್ಟ್ ಇನ್ನೊಂದಿಷ್ಟು ದಿನ ಡಿ ಗ್ಯಾಂಗ್ ಜೈಲಲ್ಲೇ ಇರಲಿ ಅಂತ ನ್ಯಾಯಾಲಯ ಹೇಳಿದೆ. ಈ ಮೂಲಕ ದರ್ಶನ್ (Darshan) ತಮ್ಮದೇ ರೆಕಾರ್ಡ್‌ವೊಂದನ್ನ ಬ್ರೇಕ್ ಮಾಡಲಿದ್ದಾರೆ. ದರ್ಶನ್ ಇಂದಿಷ್ಟು ದಿನ ಜೈಲಿನಲ್ಲೇ ಇರಬೇಕಾಗುತ್ತೆ. ದರ್ಶನ್ 2011ರಲ್ಲಿ ಹೆಂಡತಿಗೆ ಹೊಡೆದಾಗ 28 ದಿನ ಜೈಲಿನಲ್ಲಿದ್ರು. ಈಗ 13 ವರ್ಷದ ನಂತರ ದರ್ಶನ್ ತಮ್ಮದೇ ರೆಕಾರ್ಡ್ ಅನ್ನ ಬ್ರೇಕ್ ಮಾಡೋ ಸನಿಹದಲ್ಲಿದ್ದಾರೆ. ನಿನ್ನೆ ನಡೆದ ನ್ಯಾಯಾಂಗ ಬಂಧನ ವಿಚಾರಣೆಯಲ್ಲಿ ಕೋರ್ಟ್ ಮತ್ತೆ 14 ದಿನಗಳ ನ್ಯಾಯಾಂಗ ಬಂಧನವನ್ನ ವಿಸ್ತರಿಸಿದೆ. ಇನ್ನೂ ಮನೆ ಊಟ ಬೇಕೆಂಬ ಅರ್ಜಿ ವಿಚಾರಣೆಯೂ ಇವತ್ತು ಕೋರ್ಟ್‌ನಲ್ಲಿ ನಡೀತು. ಆದ್ರೆ ನ್ಯಾಯಾಲಯ ವಿಚಾರಣೆಯನ್ನ ನಾಳೆಗೆ ಮುಂದೂಡಿದೆ. 

ಇದನ್ನೂ ವೀಕ್ಷಿಸಿ:  ಭೂಕುಸಿತ, ಪ್ರವಾಹ ಭೀತಿ, ಇನ್ನೆಷ್ಟು ಕಾಲ ಈ ಜಲದಿಗ್ಬಂಧನ? ಯಾವ್ಯಾವ ಜಿಲ್ಲೆಗಳ ಪರಿಸ್ಥಿತಿ ಏನಾಗಿದೆ..?

Related Video