Asianet Suvarna News Asianet Suvarna News

ಮಸೀದಿ ಕಮಾನ್ ನಿರ್ಮಾಣ ವಿಚಾರಕ್ಕೆ ಗಲಾಟೆ! ಬಿಜೆಪಿ ವಿರೋಧದ ಬಳಿಕ ಕಾಮಗಾರಿಗೆ 2 ದಿನ ತಡೆ!

ಅದು ಪುರಾತತ್ವ ಇಲಾಖೆಗೆ ಸೇರಿದ ಕೋಟೆ ಜಾಗ. ಆ ಜಾಗದ ಸುತ್ತಮುತ್ತಲ್ಲೂ 100 ಮೀಟರ್ ಹೊಸ ಕಾಮಗಾರಿ ಮಾಡಬಾರದು ಅಂತ ಸರ್ಕಾರದ ನಿಯಮವಿದೆ. ಒಂದು ವೇಳೆ ಏನೇ ಕಾಮಗಾರಿ ಮಾಡಿದ್ರೂ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದ್ರೆ ಇಲ್ಲಿ ಮಾತ್ರ ಯಾರ ಅನುಮತಿ ಇಲ್ಲದೆ ನಗರಸಭೆ ಹಣ ಕೊಟ್ಟು, ಈಗ ವಿವಾದಕ್ಕೆ ಎಡೆ ಮಾಡಿದೆ. 


ಅಲ್ಲಾವುದ್ಧೀನ್ ದರ್ಗಾಕ್ಕೆ ಕಮಾನ್ ನಿರ್ಮಾಣ ಮಾಲಾಗ್ತಿದೆ. ರಾಯಚೂರು(Raichur) ನಗರದ ಭಗತ್ ಸಿಂಗ್ ವೃತ್ತದ ಬಳಿ ಪುರಾತತ್ವ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಮಸೀದಿಯ ಕಮಾನ್ ಕಾಮಗಾರಿ(Arch work of the mosque) ಮಾಡಲಾಗ್ತಿತ್ತು. ರಾಯಚೂರು ನಗರಸಭೆಯೇ ಟೆಂಡರ್ ಮಾಡಿ 15ಲಕ್ಷ ರೂ. ನೀಡಿದೆ. ಹೀಗಾಗಿ ಟೆಂಡರ್ ಪಡೆದ ಗುತ್ತಿಗೆದಾರ ಪುರಾತತ್ವ ಇಲಾಖೆಗೆ(archeology department) ಸೇರಿದ ಕೋರ್ಟ್ ಜಾಗದಲ್ಲಿ ಕಾಮಗಾರಿ ಆರಂಭಿಸಿದ್ದ. ಆದ್ರೆ ಇದಕ್ಕೆ ಬಿಜೆಪಿ ನಾಯಕರು ವಿರೋಧಿಸಿದ್ದಾರೆ. ಪುರಾತತ್ವ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಹಜರತ್ ಸೈಯದ್ ಶಾ ರೋಧ ವ್ಯಕ್ತಪಡಿಸಿತು. ರಾಯಚೂರು ನಗರ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಆಗಮಿಸಿ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದ್ರು. ಈ ವೇಳೆ ಕೆಲ ಮುಸ್ಲಿಂ ಯುವಕರು ಮಧ್ಯಪ್ರವೇಶ ಮಾಡಿ ಅಲ್ಲಾ ಹೂ ಅಕ್ಬರ್ ಘೋಷಣೆ ಕೂಗಿ ಒಗ್ಗಟ್ಟು ಪ್ರದರ್ಶನ ಮಾಡಿದ್ರು. ಆಗ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಜೈ ಶ್ರೀರಾಮ್ ಘೋಷಣೆ ಕೂಗಿದ್ರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯ್ತು. ಪರಿಸ್ಥಿತಿ ಕೈಮೀರುವ ಮುನ್ನ ಪೊಲೀಸರು ಮಧ್ಯಪ್ರವೇಶ ಮಾಡಿ ಎರಡೂ ಗುಂಪುಗಳನ್ನ ಚದುರಿಸಿದ್ರು.ರಾಯಚೂರು ನಗರಸಭೆ ಕಮಿಷನರ್ ಭೇಟಿ ಮಾಡಿದ ಬಿಜೆಪಿ ನಿಯೋಗ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿತು.. ಇದರ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ಕೂಡ ನಗರಸಭೆ ಪೌರಾಯುಕ್ತರ ಜೊತೆಗೆ ಚರ್ಚೆ ನಡೆಸಿದ್ರು. ಕಾನೂನು ಬಿಟ್ಟು ಕಾಮಗಾರಿ ನಡೆದಿದ್ರೆ ಅವರು ದೂರು ನೀಡಬಹುದಾಗಿತ್ತು. ಆದ್ರೆ ಕಾಮಗಾರಿ ನಡೆದ ಸ್ಥಳಕ್ಕೆ ಬಂದು ಘೋಷಣೆ ಕೂಗಿ, ಕಾಮಗಾರಿ ನಿಲ್ಲಿಸಿ ಅನ್ನೋದು ಎಷ್ಟು ಸರಿ ಎಂದು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ರು.ಪರ-ವಿರೋಧ ಕಾರಣದಿಂದ ಕಾಮಗಾರಿ ನಡೆದ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿದ ನಗರಸಭೆ,  ಎರಡು ದಿನಗಳ ಕಾಲ ಕಾಮಗಾರಿಗೆ ತಡೆ ನೀಡಿದೆ. ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳೋದಾಗಿ ಪೌರಾಯುಕ್ತರು ಹೇಳಿದ್ರು.

ಇದನ್ನೂ ವೀಕ್ಷಿಸಿ:  ಪತ್ನಿಗೆ ಚಾಕು ಇರಿದು ನೇಣಿಗೆ ಶರಣಾದ ಪಾಪಿ ಪತಿ: ಆಸ್ಪತ್ರೆಯಲ್ಲಿ ಹೆಂಡತಿ ಸಾವು-ಬದುಕಿನ ಮಧ್ಯೆ ಹೋರಾಟ

Video Top Stories