Asianet Suvarna News Asianet Suvarna News

ಜನರ ಪ್ರಾಣದ ಜತೆ ಕಾರು ಚಾಲಕನ ಚೆಲ್ಲಾಟ: ಒಂಟಿ ಸಲಗದಿಂದ ಕೂದಲೆಳೆ ಅಂತರದಲ್ಲಿ ಬಚಾವ್

ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಕಾರು ಚಾಲಕ ಪಾರಾದ ಘಟನೆ, ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ-ದಾಂಡೇಲಿ ಮಾರ್ಗದಲ್ಲಿ ನಡೆದಿದೆ.
 

ಯಲ್ಲಾಪುರ-ದಾಂಡೇಲಿ ಮಾರ್ಗದಲ್ಲಿ ಒಂಟಿ ಸಲಗ ಕಂಡು ದೂರದಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಇನ್ನು  ಆನೆ ಸಾಗುತ್ತಿದ್ದಂತೇ ಆನೆಯ ಹತ್ತಿರ ಕಾರು ಸಾಗಿದ್ದು, ಇದೇ ವೇಳೆ ಆನೆ ತಿರುಗಿ ದಾಳಿ ಮಾಡಲು ಆರಂಭಿಸಿದೆ. ಕೂಡಲೇ ರಸ್ತೆಯ ಬದಿಯಲ್ಲಿ ಕಾರು ತಿರುಗಿಸಿ ಚಾಲಕ ಬಚಾವ್ ಆಗಿದ್ದಾನೆ. ತಾಳ್ಮೆ ಇಲ್ಲದೆ ಜನರ ಪ್ರಾಣದ ಜತೆ ಕಾರು ಚಾಲಕ ಚೆಲ್ಲಾಟವಾಡಿದ್ದು, ಕೂದಲೆಳೆ ಅಂತರದಲ್ಲಿ ಅಪಾಯ ತಪ್ಪಿದೆ. ಕೊನೆಗೂ ರಸ್ತೆ ಬಿಟ್ಟು ಕಾಡಿಗೆ ಒಂಟಿ ಸಲಗ ಹೋಗಿದೆ.

Video Top Stories