Asianet Suvarna News Asianet Suvarna News

ಅಂಗನವಾಡಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ..ಕಟ್ಟಡ ಖಾಲಿ ಮಾಡುವಂತೆ ಕಾರ್ಯಕರ್ತೆಯರ ಮೇಲೆ ಒತ್ತಡ

ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು 7 ತಿಂಗಳುಗಳೇ ಕಳೆದಿದೆ. ಆದ್ರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತೋರಿದ ಮುತುವರ್ಜಿ ಬೇರೆ ಇಲಾಖೆಗಳ ಮೇಲೆ ಸರ್ಕಾರ ತೋರುತ್ತಿಲ್ವಾ ಅನ್ನೋ ಚರ್ಚೆಗಳು ಶುರುವಾಗಿವೆ. ಯಾಕಂದ್ರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ತಾಪ್ತಿಗೆ ಬರುವ ಅಂಗನವಾಡಿಗಳ ಬಾಡಿಗೆ ವರ್ಷದಿಂದ ಬಾಕಿಯಿರಿಸಿಕೊಂಡಿದ್ದು, ಸರ್ಕಾರದ ಮೇಲೆ ಇಂಥದ್ದೊಂದು ಆರೋಪ ಮಾಡುವಂತೆ ಆಗಿದೆ.
 

ಪುಟ್ಟ ಪುಟ್ಟ ಮಕ್ಕಳು.. ಬಾಡಿಗೆ ಕಟ್ಟದಲ್ಲೆ ಪಾಠ, ಆಟ.. ಆದ್ರೆ, ಈ ಬಾಡಿಗೆ ಕಟ್ಟಡಗಳಿಗೆ ಸರ್ಕಾರ ಬಾಡಿಗೆ ಕದ ಕಾರಣ ಅಂಗನವಾಡಿ ಕಾರ್ಯಕರ್ತೆಯರು ಕಣ್ಣೀರಿಡುವಂತೆ ಆಗಿದೆ. ಹೌದು ಉತ್ತರಕನ್ನಡ (Uttara Kannada)ಜಿಲ್ಲೆಯಲ್ಲಿ ಅಂಗನವಾಡಿ(Anganawadis) ಕಾರ್ಯಕರ್ತೆಯರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ತಮಗೆ ಬರುವ ಅಲ್ಪ ಸಂಬಳವನ್ನೂ ಅಂಗನವಾಡಿಯ ಬಾಡಿಗೆಗೆ(Rent) ನೀಡುವ ದುರ್ಗತಿ ಅಂಗನವಾಡಿ ಕಾರ್ಯಕರ್ತೆಯರದ್ದಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ 2,782 ಅಂಗನವಾಡಿಗಳಿವೆ. ಇದರಲ್ಲಿ 322 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಅಂಗನವಾಡಿ ಕಟ್ಟಡಕ್ಕೆ 4 ರಿಂದ 5 ಸಾವಿರ ರೂ. ವರೆಗೆ ಬಾಡಿಗೆ ನಿಗದಿ ಮಾಡಲಾಗಿದೆ. ಆದ್ರೆ ಇವುಗಳ ಬಾಡಿಗೆ ಪಾವತಿಗೆ ಕಳೆದ 1 ವರ್ಷದಿಂದ ಅನುದಾನದ ಬಿಡುಗಡೆಯಾಗಿಲ್ಲ. ಕಟ್ಟಡದ ಮಾಲೀಕರಿಗೆ ಬಾಡಿಗೆ ಸಂದಾಯವಾಗಿಲ್ಲ. ಹೀಗಾಗಿ ಕಟ್ಟಡ ಖಾಲಿ ಮಾಡುವಂತೆ ಮಾಲೀಕರು ಕಾರ್ಯಕರ್ತೆಯರ ಮೇಲೆ ಒತ್ತಡ ಹೇರುತ್ತಿದ್ದಾರಂತೆ. 2,782 ಅಂಗನವಾಡಿಗಳ ಪೈಕಿ ಬಾಡಿಗೆ ಕಟ್ಟಲು ಸಾಧ್ಯವಾಗದೇ, 7 ಅಂಗನವಾಡಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರವಾರದ ಹಬ್ಬುವಾಡ, ಸೋನಾರವಾಡ, ಹರಿದೇವ ನಗರ, ಕೆ.ಎಚ್.ಬಿ ಕಾಲೋನಿ ಸೇರಿದಂತೆ ಹಲವು ಅಂಗನವಾಡಿಗಳಲ್ಲಿ 1 ವರ್ಷದಿಂದ ಬಾಡಿಗೆ ಹಣ ಸಂದಾಯವಾಗಿಲ್ಲ. ಕೆಲವು ಅಂಗನವಾಡಿಗಳಲ್ಲಂತೂ ಕಾರ್ಯಕರ್ತೆಯರೇ ತಮ್ಮ ಸಂಬಳದಲ್ಲಿ ಬಾಡಿಗೆ ಕಟ್ಟುತ್ತಿದ್ದಾರೆ. ಅಧಿಕಾರಿಗಳು ಹೇಳುವ ಪ್ರಕಾರ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ಈ ಸಮಸ್ಯೆ ಎದುರಾಗಿದೆ ಎನ್ನುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಜನರನ್ನು ಆಕರ್ಷಿಸುತ್ತಿದೆ ವಿನೂತನ ಶಿಲೋದ್ಯಾನ..ಜಿಲ್ಲಾಡಳಿತದಿಂದ ವೀರಗಲ್ಲುಗಳ ರಕ್ಷಣಾ ಕಾರ್ಯ

Video Top Stories