Asianet Suvarna News Asianet Suvarna News

ಕಾರು, ಲಾರಿ, ಬಸ್‌ ಮಧ್ಯೆ ಸರಣಿ ಅಪಘಾತ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಂಗಳೂರಿನ ರಾ.ಹೆ. 66 ರ ಜೆಪ್ಪಿನ ಮೊಗರು ಎಂಬಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ವ್ಯಾಗನರ್‌ ಕಾರು ಅಪ್ಪಚ್ಚಿಯಾಗಿದೆ.
 

ಮಂಗಳೂರು: ವಾಹನಗಳ ನಡುವೆ ಸರಣಿ ಅಪಘಾತ(Accident) ನಡೆದಿದ್ದು, ಮಧ್ಯೆ ಇದ್ದ ವ್ಯಾಗನರ್‌ ಕಾರು(Car) ಅಪ್ಪಚ್ಚಿಯಾಗಿರುವ ಘಟನೆ ಮಂಗಳೂರಿನ ರಾ.ಹೆ. 66 ರ ಜೆಪ್ಪಿನ ಮೊಗರು ಎಂಬಲ್ಲಿ ನಡೆದಿದೆ. ಕಾರು ಚಾಲಕನೋರ್ವ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಈ ಅವಘಡ ಸಂಭವಿಸಿದೆ. ಕಾರು, ಲಾರಿ(Lorry) ಹಾಗೂ ಕೇರಳದ ಸರ್ಕಾರಿ ಬಸ್ಸಿನ(Bus) ನಡುವೆ ಸರಣಿ ಅಪಘಾತ ನಡೆದಿದೆ. ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲಾರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಸಮೀಪದಲ್ಲೇ ಈ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿ ಹಾಗೂ ಬಸ್ ನಡುವೆ ಸಿಲುಕಿದ ವ್ಯಾಗನಾರ್ ಕಾರು ನುಜ್ಜುಗುಜ್ಜಾಗಿದೆ. ವ್ಯಾಗನಾರ್ ಕಾರಿನ ಚಾಲಕ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಇದನ್ನೂ ವೀಕ್ಷಿಸಿ:  Weekly Horoscope: ಮೇಷ ರಾಶಿಯವರಿಗೆ ಮಾನಸಿಕ ದುರ್ಬಲತೆ ಉಂಟಾಗಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ

Video Top Stories