
Mangaluru: ಉಚ್ಚಿಲ ದೇವಿಗೆ 400 ಗ್ರಾಂ ಚಿನ್ನದ ಮೀನಿನ ಸರ ಸಮರ್ಪಣೆ
* ಮಂಗಳೂರು ತಾಲೂಕಿನ ಉಚ್ಚಿಲದ ಮೊಗವೀರ ಸಮುದಾಯದ ಶ್ರೀ ಮಹಾಲಕ್ಷ್ಮೀ ದೇವಿ
* ಚಿನ್ನದಲ್ಲಿ ಮೀನಿನ ರೂಪಗಳಿಂದ ರಚಿಸಲಾದ ಸರ
* ನೋಡಲು ಅತ್ಯಾಕರ್ಷಕವಾದ ಚಿನ್ನದ ಸರ
ಮಂಗಳೂರು(ಏ.11): ತಾಲೂಕಿನ ಉಚ್ಚಿಲದ ಮೊಗವೀರ ಸಮುದಾಯದ ಶ್ರೀ ಮಹಾಲಕ್ಷ್ಮೀ ದೇವಿಯ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ರಥೋತ್ಸವ ಮತ್ತು ನಾಗಮಂಡಲ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಪ್ರಯುಕ್ತ ಮಂಗಳೂರಿನ ಸೌತ್ ವಾರ್ಫ್ ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ನಿಯಮಿತದ ವತಿಯಿಂದ ದೇವಿಗೆ ಅಪರೂಪದ ಚಿನ್ನದ ಮೀನಿನ ಸರವನ್ನು ಸಮರ್ಪಿಸಲಾಗಿದೆ. ಚಿನ್ನದಲ್ಲಿ ಮೀನಿನ ರೂಪಗಳಿಂದ ರಚಿಸಲಾಗಿರುವ ಈ ಸರವು ಸುಮಾರು 50 ಪವನ್ (400 ಗ್ರಾಂ) ತೂಕವಿದ್ದು, ನೋಡಲು ಅತ್ಯಾಕರ್ಷಕವಾಗಿದೆ.
Vijayapura Crime: ಬೇಸಿಗೆ ಬಂದ್ರೆ ವಿಜಯಪುರದಲ್ಲಿ ಕಳ್ಳರಿಗೆ ಹಬ್ಬವೋ ಹಬ್ಬ: ಪೊಲೀಸರಿಗೂ ಪೀಕಲಾಟ..!