ಸಿಎಂ ತವರು ಜಿಲ್ಲೆಯಲ್ಲೂ ಬ್ರಿಟನ್‌ ಬಾಂಬ್‌ ಭಯ..? ಆತಂಕದಲ್ಲಿ ಜನತೆ

ಬ್ರಿಟನ್‌ನಿಂದ ಬಂದ ನಾಲ್ವರಿಗೆ ಕೊರೋನಾ ದೃಢ| ಒಂದೇ ಕುಟಂಬದ ನಾಲ್ವರಿಗೆ ಒಕ್ಕರಿಸಿದ ಮಹಾಮಾರಿ| ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ| ಕಳೆದ ವಾರ ಲಂಡನ್‌ನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ 23 ಮಂದಿ| 

Share this Video
  • FB
  • Linkdin
  • Whatsapp

ಶಿವಮೊಗ್ಗ(ಡಿ.24): ಬ್ರಿಟನ್‌ನಿಂದ ಶಿವಮೊಗ್ಗ ಜಿಲ್ಲೆಗೆ ಬಂದ ನಾಲ್ವರಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಪತಿ, ಪತ್ನಿ, ಇಬ್ಬರು ಮಕ್ಕಳಿಗೆ ಕೋವಿಡ್‌ ಸೋಂಕು ತಗುಲಿದೆ. ಇವರೆಲ್ಲರಿಗೂ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಬಿಗ್‌ 3 ಇಂಪ್ಯಾಕ್ಟ್‌: ಆಟೋ ಚಾಲಕನ ಮಕ್ಕಳಿಗೆ ಸಿಕ್ತು ಆನ್‌ಲೈನ್‌ ಕ್ಲಾಸ್‌..!

ಇವರಿಗೆ ತಗುಲಿರುವುದು ಬ್ರಿಟನ್‌ ವೈರಸ್ಸಾ? ಅಥವಾ ಕೊರೋನಾ ವೈರಸ್ಸಾ ಎಂಬುದರ ಬಗ್ಗೆ ವರದಿ ಬರಬೇಕಿದೆ. ಕಳೆದ ವಾರ ಲಂಡನ್‌ನಿಂದ ಶಿವಮೊಗ್ಗಕ್ಕೆ 23 ಮಂದಿ ಆಗಮಿಸಿದ್ದರು, ಅವರ ಪೈಕಿ ನಾಲ್ವರಿಗೆ ಕೊರೋನಾ ದೃಢಪಟ್ಟಿದೆ.

Related Video