ಬಿಗ್‌ 3 ಇಂಪ್ಯಾಕ್ಟ್‌: ಆಟೋ ಚಾಲಕನ ಮಕ್ಕಳಿಗೆ ಸಿಕ್ತು ಆನ್‌ಲೈನ್‌ ಕ್ಲಾಸ್‌..!

ಫೀಸ್‌ ಕಟ್ಟದಿದ್ದಕ್ಕೆ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ ಕಟ್‌ ಮಾಡಿದ್ದ ಅಮರಜ್ಯೋತಿ ಆಂಗ್ಲ ಮಾಧ್ಯಮ ಖಾಸಗಿ ಶಾಲೆ| ಈ ಸಂಬಂಧ ವರದಿ ಪ್ರಸಾರ ಮಾಡಿದ್ದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3| ಶಾಲೆಗೆ ದೌಡಾಯಿಸಿ ಪೋಷಕರು ಹಾಗೂ ಮಕ್ಕಳನ್ನ ಭೇಟಿ ಮಾಡಿ ಚರ್ಚೆ ನಡೆಸಿದ ಬಿಇಒ| 

First Published Dec 24, 2020, 12:10 PM IST | Last Updated Dec 24, 2020, 12:15 PM IST

ಬೆಂಗಳೂರು(ಡಿ.24): ಕೆ.ಅರ್‌.ಪುರಂನ ಅಮರಜ್ಯೋತಿ ಆಂಗ್ಲ ಮಾಧ್ಯಮ ಖಾಸಗಿ ಶಾಲೆ ಫೀಸ್‌ ಕಟ್ಟದಿದ್ದಕ್ಕೆ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ಅನ್ನು ಕಟ್‌ ಮಾಡಿತ್ತು. ಹೀಗಾಗಿ ಶಿಕ್ಷಣದಿಂದ ವಂಚಿತರಾದ ಮಕ್ಕಳು ಕಣ್ಣೀರಲ್ಲಿ ಕೈತೊಳೆಯುವಂತಾಗಿತ್ತು. ಈ ಸಂಬಂಧ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ವರದಿ ಪ್ರಸಾರ ಮಾಡಿತ್ತು. 

ಆಟೋ ಚಾಲಕರ ಮಕ್ಕಳಿಗಿಲ್ಲ ಶಿಕ್ಷಣ ಭಾಗ್ಯ: ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡದ ಖಾಸಗಿ ಶಾಲೆ..!

ವರದಿ ಪ್ರಸಾರದ ಬಳಿಕ ಎಚ್ಚೆತ್ತ ಬೆಂಗಳೂರು ದಕ್ಷಿಣ ಬಿಇಒ ಹುನಮಂತರಾಯ ಅವರು ಶಾಲೆಗೆ ದೌಡಾಯಿಸಿ ಪೋಷಕರು ಹಾಗೂ ಮಕ್ಕಳನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಳಿಕ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ ಶುರು ಮಾಡಿ, ಮೊಬೈಲ್‌, ಪುಸ್ತಕವನ್ನ ನೀಡಿದ್ದಾರೆ.