Bengaluru: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ, 27 ವರ್ಷ ಯುವಕ ಸಾವು

*  ಸಂಜಯ್‌ ನಗರದ ಪಾರ್ಕ್‌ ಬಳಿ ನಡೆದ ದುರ್ಘಟನೆ 
*  ಪಾರ್ಕ್‌ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಿದ್ಯುತ್‌ ತಂತಿ
*  ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು?

Share this Video
  • FB
  • Linkdin
  • Whatsapp

ಬೆಂಗಳೂರು(ಏ.26): ಬೆಂಗ್ಳೂರಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದೆ. ಹೌದು, ವಿದ್ಯುತ್‌ ತಂತಿ ತಗುಲಿ 27 ವರ್ಷದ ಕಿಶೋರ್‌ ಎಂಬ ಯುವಕ ಮೃತಪಟ್ಟಿದ್ದಾನೆ. ಸಂಜಯ್‌ ನಗರದ ಪಾರ್ಕ್‌ ಬಳಿ ಈ ದುರ್ಘಟನೆ ಸಂಭವಿಸಿದೆ. ಪಾರ್ಕ್‌ ಬಳಿ ವಿದ್ಯುತ್‌ ತಂತಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು, ಇದನ್ನ ಗಮನಿಸದ ಕಿಶೋರ್‌ ವಿದ್ಯುತ್‌ ತಂತಿ ತುಳಿದ ಪರಿಣಾಮ ಸಾವನ್ನಪ್ಪಿದ್ದಾನೆ. ಹೀಗಾಗಿ ಬೆಸ್ಕಾಂ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಜಯ್‌ನನ್ನ ಕಳೆದುಕೊಂಡಿದ್ದರಿಂದ ಬೆಸ್ಕಾಂ ಅಧಿಕಾರಿಗಳಿಗೆ ಕುಟುಂಬಸ್ಥರು ಹಿಡಿಶಾಪ ಹಾಕಿದ್ದಾರೆ. ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾಲೇಜ್ ಆವರಣದಲ್ಲಿ ಕೂದಲಿಡಿದು ಕಿತ್ತಾಡಿಕೊಂಡ ಹುಡುಗಿಯರು, ನೋಡಿ ಮಜಾ ತಗೊಂಡ ಹುಡುಗ್ರು

Related Video