IPL 2020: ಹೈದಾರಾಬಾದ್ ಎದುರು ಪಂಜಾಬ್ ಹೀನಾಯ ಸೋಲು ಕಂಡಿದ್ದೇಗೆ?

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್‌ಸ್ಟೋವ್ ಸಿಡಿಲಬ್ಬರದ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆ ಬಳಿಕ ಕೊನೆಯಲ್ಲಿ ಪಂಜಾಬ್ ಕಮ್‌ಬ್ಯಾಕ್ ಮಾಡಿತಾದರೂ, ಹೈದರಾಬಾದ್ ತಂಡ ಅಂತಿಮವಾಗಿ 201 ರನ್ ಬಾರಿಸುವಲ್ಲಿ ಯಶಸ್ವಿಯಾಯಿತು. 

First Published Oct 9, 2020, 12:14 PM IST | Last Updated Oct 9, 2020, 12:14 PM IST

ಬೆಂಗಳೂರು(ಅ.09): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 22ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಆಘಾತಕಾರಿಯಾದ ಸೋಲು ಕಂಡಿದೆ. 

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್‌ಸ್ಟೋವ್ ಸಿಡಿಲಬ್ಬರದ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆ ಬಳಿಕ ಕೊನೆಯಲ್ಲಿ ಪಂಜಾಬ್ ಕಮ್‌ಬ್ಯಾಕ್ ಮಾಡಿತಾದರೂ, ಹೈದರಾಬಾದ್ ತಂಡ ಅಂತಿಮವಾಗಿ 201 ರನ್ ಬಾರಿಸುವಲ್ಲಿ ಯಶಸ್ವಿಯಾಯಿತು. 

ಪಂಜಾಬ್‌ಗೆ 5ನೇ ಸೋಲು, 3ನೇ ಸ್ಥಾನಕ್ಕೆ ಲಗ್ಗೆ ಇಟ್ಟ ಹೈದರಾಬಾದ್!

ಇನ್ನು ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ನಿಕೋಲಸ್ ಪೂರನ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಪಂದ್ಯದ ಟರ್ನಿಂಗ್ ಪಾಯಿಂಟ್ ಏನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.