Asianet Suvarna News Asianet Suvarna News

IPL 2020: RCB ಲುಕ್ ಬದಲಿಸಿದ ಪಂಚ ಪಾಂಡವರು..!

ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ್ರೂ ಅಂತಿಮ ಸುತ್ತಿನಲ್ಲಿ ಎಡವುದರ ಮೂಲಕ ಕಪ್ ಗೆಲ್ಲುವ ಅವಕಾಶವನ್ನು ಬೆಂಗಳೂರು ಮೂಲದ ಫ್ರಾಂಚೈಸಿ ಕೈಚೆಲ್ಲಿಕೊಂಡಿತ್ತು. ಆದರೆ ಇದೀಗ ಆರ್‌ಸಿಬಿ ಖದರ್ ಬದಲಾಗಿದೆ.

ದುಬೈ(ಸೆ.17): ಕಳೆದ 12 ಆವೃತ್ತಿಗಳಿಂದಲೂ ಐಪಿಎಲ್ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ದುಬೈನಲ್ಲಿ ಆರಂಭವಾಗಲಿರುವ 13ನೇ ಆವೃತ್ತಿಯ ಐಪಿಎಲ್‌ಗೆ ಮೈಕೊಡವಿಕೊಂಡು ನಿಂತಿದೆ.

ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ್ರೂ ಅಂತಿಮ ಸುತ್ತಿನಲ್ಲಿ ಎಡವುದರ ಮೂಲಕ ಕಪ್ ಗೆಲ್ಲುವ ಅವಕಾಶವನ್ನು ಬೆಂಗಳೂರು ಮೂಲದ ಫ್ರಾಂಚೈಸಿ ಕೈಚೆಲ್ಲಿಕೊಂಡಿತ್ತು. ಆದರೆ ಇದೀಗ ಆರ್‌ಸಿಬಿ ಖದರ್ ಬದಲಾಗಿದೆ.

ಐಪಿಎಲ್‌ ಕಣದಲ್ಲಿ ‘ಧಾರವಾಡದ ಹುಡುಗ’: ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ

ದುಬೈನಲ್ಲಿ ಅಭ್ಯಾಸ ನಿರತವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿಂದೆಂದಿಗಿಂತಲೂ ಬಲಿಷ್ಠವಾಗಿ ಕಾಣಿಸುತ್ತಿದೆ. ಈ ಆರ್‌ಸಿಬಿ ಬದಲಾವಣೆಗೆ ಕಾರಣವೂ ಇದೆ. ತಂಡದ ಪಂಚಪಾಂಡವರಿಂದಾಗಿ ಆರ್‌ಸಿಬಿ ಲುಕ್ ಬದಲಾಗಿದೆ. ಯಾರು ಆ ಪಂಚ ಪಾಂಡವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.