ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಪ್ರಧಾನಿಗೆ ಅಧಿಕೃತ ಆಹ್ವಾನ ನೀಡಲಿರುವ ಸಿಎಂ ಯೋಗಿ

ಸಂತರ ಪಟ್ಟಿಯನ್ನು ಸಿದ್ಧಪಡಿಸುತ್ತಿರುವ ದೇವಾಲಯ ಟ್ರಸ್ಟ್
ಭಕ್ತರಿಗೆ ಒಂದು ತಿಂಗಳ ಕಾಲ ಉಚಿತ ಊಟದ ವ್ಯವಸ್ತೆ
ಜನವರಿಯಲ್ಲಿ ಪ್ರತಿದಿನ ಒಂದು ಲಕ್ಷ ಜನರಿಗೆ ಆಹಾರ 

Share this Video
  • FB
  • Linkdin
  • Whatsapp

ಅಯೋಧ್ಯಾ ರಾಮಮಂದಿರ (Ram mandir) ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಮುಂದಿನ ಜನವರಿಯಲ್ಲಿ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ರಾಮಮಂದಿರ ಉದ್ಘಾಟಿಸಲಿದ್ದಾರೆ. ಅಂತಿಮ ಹಂತದಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಇದ್ದು, ಅಯೋಧ್ಯೆಯಲ್ಲಿ ಶ್ರೀರಾಮನ(Sri Ram) ಭವ್ಯ ಮಂದಿರ ನಿರ್ಮಾಣಗೊಳ್ಳುತ್ತಿದೆ. ರಾಮಜನ್ಮಭೂಮಿಯಲ್ಲಿ ಭರದಿಂದ ದೇಗುಲ ನಿರ್ಮಾಣ ಸಾಗುತ್ತಿದೆ. 2024ರ ಜನವರಿಯಲ್ಲಿ ಶ್ರೀರಾಮನ ದೇಗುಲ ಲೋಕಾರ್ಪಣೆಯಾಗಲಿದ್ದು, ಜ. 14ರಿಂದ ಅಯೋಧ್ಯೆ ಮಂದಿರದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುವುದು. ಜ.14ರಿಂದ 24ರ ಮಧ್ಯೆ ದೇಗುಲದಲ್ಲಿ ಅಂತಿಮ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಸಿಎಂ ಯೋಗಿ ಆದಿತ್ಯನಾಥ್‌(Yogi Adityanath) ಪ್ರಧಾನಿ ಮೋದಿಗೆ ಅಧಿಕೃತ ಆಹ್ವಾನ ನೀಡಲಿದ್ದಾರೆ. ಹಾಗಾಗಿ ದೆಹಲಿಯಲ್ಲಿ ಮೋದಿಯನ್ನು ಉತ್ತರ ಪ್ರದೇಶ ಸಿಎಂ ಭೇಟಿಯಾಗಲಿದ್ದಾರೆ. ಸಂಜೆ ಭೇಟಿಯಾಗಿ ಆಹ್ವಾನ ನೀಡಲಿರುವ ಯೋಗಿ ಆದಿತ್ಯನಾಥ್.

ಇದನ್ನೂ ವೀಕ್ಷಿಸಿ: ರಾಜ್ಯ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ: 35 ಐಪಿಸ್‌ ಅಧಿಕಾರಿಗಳ ವರ್ಗಾವಣೆ

Related Video