
ವಕ್ಫ್ಗೆ ಮೋದಿ ಮಾಸ್ಟರ್ ಸ್ಟ್ರೋಕ್, ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಯ ವಿರೋಧ!
ಆರ್ಟಿಕಲ್ 370 ಬಳಿಕ ಮೋದಿ ಮತ್ತೊಂದು ಮಾಸ್ಟರ್ ಸ್ಟ್ರೋಕ್. ವಕ್ಫ್ ಕಾನೂನು ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ವಕ್ಫ್ ಬೋರ್ಡ್ ಸರ್ವಾಧಿಕಾರಕ್ಕೆ ಕೇಂದ್ರ ಸರ್ಕಾರ ಅಂಕುಶ ಹಾಕೋಕೆ ಸಜ್ಜಾಗಿದೆ.
ನವದೆಹಲಿ (ಆ.8): ವಕ್ಫ್ ಮಂಡಳಿ ಸರ್ವಾಧಿಕಾರಕ್ಕೆ ಮೋದಿ ಸರ್ಕಾರದ ಅಂಕುಶ ಹಾಕಿದೆ. ಗುರುವಾರ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಿಣ್ ರಿಜಿಜು ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿದೆ.
ತಿದ್ದುಪಡಿ ಮಸೂದೆ ಮೇಲೆ ಚರ್ಚೆಗೆ ಅವಕಾಶ ಎದುರಾದಾಗ ಕೋಲಾಹಲವಾಗಿದೆ. ಮುಸ್ಲಿಮರೇ ಟಾರ್ಗೆಟ್ ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರೆ, 44 ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.
Add Asianetnews Kannada as a Preferred Source

ಎನ್‌ಡಿಎ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕೋಪ ಇದೆ: ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಿಎಂ ಕಿಡಿ
ಹೊಸ ತಿದ್ದುಪಡಿಯಲ್ಲಿ, ಇಸ್ಲಾಂ ಅನುಸರಿಸುವ ವ್ಯಕ್ತಿ ಎಂದು ಪರಿಗಣನೆ. ಮಹಿಳೆಯರಿಗೂ ಆದ್ಯತೆ ನೀಡಲಾಗುತ್ತದೆ. ಸರ್ವೆ ಕಮಿಷನರ್ ಪಾತ್ರ ಇನ್ಮುಂದೆ ಜಿಲ್ಲಾಧಿಕಾರಿಗಳು ನಿರ್ವಹಿಸುತ್ತಾರೆ. ವಕ್ಫ್ ಆಸ್ತಿ ಪಾರದರ್ಶಕತೆಗಾಗಿ ಕೇಂದ್ರದ ಪೋರ್ಟಲ್ನಲ್ಲಿ ನೋಂದಣಿ. ವಕ್ಫ್ ಕಮಿಟಿಯಲ್ಲಿ ಮಹಿಳಾ ಸದಸ್ಯರ ಪ್ರಾತಿನಿಧ್ಯ ಕಡ್ಡಾಯವಾಗಿರಲಿದೆ.