ಬೀದಿಗೆ ಬಂತು ಆಸ್ತಿ ಜಗಳ.. ಸಾರ್ವಜನಿಕರ ಎದುರೇ ಗಂಡನಿಗೆ ಗೂಸಾ ಕೊಟ್ಟ ಪತ್ನಿ!

ಆಸ್ತಿ ಅಂದ್ರೆನೆ ಹಾಗೇ ಅನ್ಸತ್ತೆ. ಎಂತವರನ್ನೂ ಕೆಟ್ಟೋರನ್ನಾಗಿ ಮಾಡಿಬಿಡುತ್ತೆ. ಆಸ್ತಿ ವಿಚಾರ ಬಂತು ಅಂದ್ರೆ ಸಾಕು ಹೆತ್ತು ಹೊತ್ತು ಸಾಕಿದವರೂ ನೆನಪಿಗೆ ಬರಲ್ಲ.

Share this Video
  • FB
  • Linkdin
  • Whatsapp

ಬಾಲಕನ ಮೇಲೆ ಹರಿದ ಕಾರ್.. ಉಸಿರು ಚೆಲ್ಲಿದ ಕಂದಮ್ಮ..! ಟ್ರೈನ್​ ಡೋರ್​​ನಲ್ಲಿ ಹುಚ್ಚಾಟ.. ಏನ್ ಹುಡುಗರೋ..? ಯಾಕಿಂಗ್ ಆಡ್ತಾರೋ..? ಬೀದಿಗೆ ಬಂತು ಆಸ್ತಿ ಜಗಳ.. ಗಂಡನಿಗೆ ಗೂಸಾ ಕೊಟ್ಟ ಪತ್ನಿ..! ಗುಡ್ಡದ ಗಂಡಾಂತರ.. ಮೂವರು ಬದುಕಿದ್ದೇ ರೋಚಕ..! ಸುದ್ದಿ ಜಗತ್ತಲ್ಲಿ ಇವತ್ತು ಸದ್ದು ಮಾಡಿದ ವೈರಲ್ ಸುದ್ದಿಗಳ ಹೂರಣವೇ ಇವತ್ತಿನ ವೈರಲ್ ವಿಸ್ಮಯ. ಜನ್ರು ಈ ಫೋನ್​ಗೆ ಎಷ್ಟು ಅಡಿಕ್ಟ್​ ಆಗ್ತಿದ್ದಾರೆ ಅಲ್ವಾ. ಕೈಯಲ್ಲಿ ಫೋನ್ ಇತ್ತು ಅಂದ್ರೆ ಅಕ್ಕಪಕ್ಕದಲ್ಲಿ ಏನಾಗ್ತಿದೆ ಅನ್ನೋ ಅರಿವೆ ಇರಲ್ಲ.. ಇಲ್ಲೊಬ್ಬ ವ್ಯಕ್ತಿ ಫೋನ್​ ನೋಡದ್ರಲ್ಲಿ ಬ್ಯುಸಿಯಾಗಿದ್ದಕ್ಕೆ ಎಂತಹಾ ಅನಾಹುತ ಸಂಭವಿಸಿದೆ. ಹಣ.. ಆಸ್ತಿ ಅಂದ್ರೆನೆ ಹಾಗೇ ಅನ್ಸತ್ತೆ.. ಎಂತವರನ್ನೂ ಕೆಟ್ಟೋರನ್ನಾಗಿ ಮಾಡಿಬಿಡುತ್ತೆ... ಆಸ್ತಿ ವಿಚಾರ ಬಂತು ಅಂದ್ರೆ ಸಾಕು ಹೆತ್ತು ಹೊತ್ತು ಸಾಕಿದವರೂ ನೆನಪಿಗೆ ಬರಲ್ಲ.. ತಾಳಿ ಕಟ್ಟಿದ ಗಂಡ ಕೂಡ ನೆನಪಿಗೆ ಬರಲ್ಲಾ ಅನ್ಸತ್ತೆ.

ಇಲ್ಲೊಬ್ಳು ಐನಾತಿ ಹೆಂಗಸು ಆಸ್ತಿಗಾಗಿ ಎಂತಹ ನೀಚ ಕೆಲಸ ಮಾಡಿದ್ದಾಳೆ ಗೊತ್ತಾ.. ? ಮಹಿಳೆಯರಿಗೆ ಎಲ್ಲೂ ಸೇಫ್ ಇಲ್ಲ ಅನ್ಸತ್ತೆ.. ಮನೆಯಲ್ಲಿ ಇದ್ರೂ ಕಳ್ಳರು ಕಾಟ.. ಮನೆಯಿಂದ ಹೊರಗೆ ಹೋದ್ರೂ ಕಳ್ಳರ ಕಾಟ.. ಮನೆಗೆ ಹೋಗ್ತಿದ್ದ ಮಹಿಳೆಗೆ ಬೈಕ್​ನಲ್ಲಿ ಬಂದವರು ಎಂತಹಾ ಶಾಕ್​ ಕೊಟ್ಟಿದ್ದಾರೆ. ಮಹಿಳೆಯೊಬ್ರು ಮನೆಗೆ ಹೋಗ್ತಿದ್ರು.. ಆಕೆ ಹೋಗ್ತಿದ್ದ ರೋಡ್​ನಲ್ಲಿ ಜನ ಸಂಚಾರ ಅಷ್ಟೇನು ಇರಲಿಲ್ಲ.. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರಿಬ್ರು ಏನ್ ಮಾಡಿದ್ದಾರೆ ಗೊತ್ತಾ.. ಅದರ ಜೊತೆಗೆ ಇಲ್ಲೊಂದು ಹಸು ನೀರು ನಿಂತ ರಸ್ತೆಯಲ್ಲಿ ಹೋಗಿ ಏನಾಗಿದೆ ಅನ್ನೋದನ್ನೂ ತೋರುಸ್ತೀವಿ. ಹೆದ್ದಾರಿ ದಾಟಲು ಹೋದ ಆಟೋ ಪಲ್ಟಿಯಾದ್ರೆ, ರಸ್ತೆ ಮಧ್ಯದಲ್ಲಿ ಸ್ಟಂಟ್ ಮಾಡ್ತಿದ್ದ ಭೂಪನಿಗೆ ಏನಾಯ್ತು. ಹೆದ್ದಾರಿ ಅಂದ್ರೆ ಕೆಳ್ಬೇಕಾ ವಾಹನಗಳೆಲ್ಲಾ ಸ್ಪೀಡಾಗಿ ಹೋಗ್ತಿರ್ತಾವೆ.. ಇಂತಹದ್ರಲ್ಲಿ ಹೆದ್ದಾರಿ ಕ್ರಾಸ್ ಮಾಡ್ಬೇಕು ಅಂದ್ರೆ ಎಷ್ಟು ಹುಷಾರಾಗಿದ್ರು ಸಾಲಾಲ್ಲಾ ಅಲ್ವಾ ಆದ್ರೆ ಇಲ್ಲೊಬ್ಬ ಅರ್ಜೆಂಟ್ ಅಸಾಮಿ ರೋಡ್​ ಕ್ರಾಸ್​ ಮಾಡಲು ಹೋಗಿ ಹಸುಗೂಸಿನ ಜೀವವನ್ನೇ ತೆಗೆದಿದ್ದಾನೆ.

Related Video